ಕರ್ನಾಟಕ ವಿಧಾನಸಭಾ ಚುನಾವಣೆ 2018 : ಜೆಡಿಎಸ್ ವಿಕಾಸ ಯಾತ್ರೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಮಾತು

By : Oneindia Kannada

Published On: 2017-11-07

15 Views

01:38

"We will definitely win 113 seats in Karnataka assembly elections 2018, and will come to power with majority" JDS state president HD Kumaraswamy told to media in Mysuru. JDS's Karnataka Vikasa Vahini rally has started from Nov 7th in Mysuru.


ಚಾಮುಂಡಿ ಸನ್ನಿಧಿಯಲ್ಲಿ 'ಕುಮಾರಪರ್ವ'ಕ್ಕೆ ಮುನ್ನುಡಿ ಬರೆದ ಜೆಡಿಎಸ್. ಮುಂಬರುವ ವಿಧಾನಸಭಾ ಚುನಾವಣೆಗೆ ಇಂದಿನಿಂದಲೇ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಲು ಜೆಡಿಎಸ್ ಮುಂದಾಗಿದೆ. ಜೆಡಿಎಸ್ ಪರ ಬಿರುಸಿನ ಪ್ರಚಾರ ನಡೆಸಲು ವಿಶೇಷವಾಗಿ ವಿನ್ಯಾಸಗೊಳಿಸಿರುವ 'ಕರ್ನಾಟಕ ವಿಕಾಸ ವಾಹಿನಿ' ವಾಹನದ ಸಂಚಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಚಾಮುಂಡಿ ಬೆಟ್ಟದಲ್ಲಿ ಅಧಿಕೃತ ಚಾಲನೆ ನೀಡಿದರು.ಜೆಡಿಎಸ್ ವಿಕಾಸ ವಾಹಿನಿ ವಾಹನವನ್ನೇರಿ ಪತ್ನಿ ಅನಿತಾ ಕುಮಾರಸ್ವಾಮಿಯವರ ಜೊತೆ ಚಾಮುಂಡೇಶ್ವರಿ ದೇಗುಲವನ್ನು ಒಂದು ಸುತ್ತು ಹಾಕಿದ ಕುಮಾರಸ್ವಾಮಿಯವರು ಮಾಧ್ಯಮದೊಂದಿಗೆ ಮಾತನಾಡಿದರು. "ಇತ್ತೀಚಿನ ಬಹುತೇಕ ಸಮೀಕ್ಷೆಗಳು ಜೆಡಿಎಸ್ 65 ಸ್ಥಾನ ಗಳಿಸಲಿದೆ ಎಂದು ಹೇಳಿವೆ, ಆದರೆ ಇದನ್ನು ಮೀರಿ 113ರ ಗಡಿ ತಲುಪುವುದೇ ನಮ್ಮ ಏಕೈಕ ಗುರಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 113ರ ಗಡಿ ತಲುಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧ" ಎಂದು ವಿಶ್ವಾಸ ವ್ಯಕ್ತಪಡಿಸಿದರು."ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಎಲ್ಲಾ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ಜೆಡಿಎಸ್ ತೊರೆದಿದ್ದ ಬಹುತೇಕ ನಾಯಕರು ಮತ್ತೆ ಜೆಡಿಎಸ್ ಗೆ ಸೇರ್ಪಡೆಯಾವಲು ಸಂಪರ್ಕದಲ್ಲಿದ್ದಾರೆ. ಆದರೆ ಕಡೆ ಕ್ಷಣದಲ್ಲಿ ಪಕ್ಷಕ್ಕೆ ಬರುವವರಿಗೆ ರೆಡ್ ಕಾರ್ಪೆಟ್ ಹಾಸುವುದಿಲ್ಲ. ಅವಕಾಶವಾದಿ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ನುಡಿದರು.ಹೈಟೆಕ್ ವ್ಯವಸ್ಥೆಯನ್ನು ಒಳಗೊಂಡಿರುವ ಜೆಡಿಎಸ್ ನ ವಿಕಾಸ ವಾಹಿನಿ ವಾಹನವು ಜೆಡಿಎಸ್ ಅಧಿಕಾರಕ್ಕೆ ಬಂದರೆ ಈಡೇರಿಸುವ ಭರವಸೆಗಳನ್ನೊಳಗೊಂಡ ಘೋಷ ವಾಕ್ಯಗಳಿಂದ ರಾರಾಜಿಸುತ್ತಿದೆ.

Trending Videos - 20 April, 2024

RELATED VIDEOS

Recent Search - April 20, 2024