ಉಡುಪಿಯ ಪರ್ಯಾಯ ಪುರ ಪ್ರವೇಶ ಭವ್ಯ ಸಮಾರಂಭ ಜನವರಿ 18, 2018 ರಂದು | Oneindia Kannada

By : Oneindia Kannada

Published On: 2018-01-05

5 Views

03:30

ಎರಡನೇ ಬಾರಿಗೆ ಶ್ರೀಕೃಷ್ಣಮಠದ ಸರ್ವಜ್ಞ ಪೀಠವನ್ನೇರಲಿರುವ ಪಲಿಮಾರು ಮಠ ಸಂಸ್ಥಾನದ 31ನೇ ಯತಿ ವಿದ್ಯಾಧೀಶ ತೀರ್ಥರ ಉಡುಪಿ ಪುರಪ್ರವೇಶ ಮತ್ತು ಪೌರ ಸನ್ಮಾನ ಕಾರ್ಯಕ್ರಮಕ್ಕೆ ಭವ್ಯವಾದ ತೆರೆಬಿದ್ದಿದೆ. ಎರಡು ವರ್ಷಕ್ಕೊಮ್ಮೆ ಕೃಷ್ಣಮಠದ ಪೂಜೆ ಮತ್ತು ಆಡಳಿತವನ್ನು ಹಸ್ತಾಂತರಿಸುವ ಪರ್ಯಾಯ ಮಹೋತ್ಸವ ಜನವರಿ ಹದಿನೆಂಟರಂದು ನಡೆಯಲಿದೆ. ಪರ್ಯಾಯ ಪೂರ್ವಭಾವಿ ತೀರ್ಥಕ್ಷೇತ್ರಯಾತ್ರೆ ಮುಗಿಸಿ, ತಿರುಪತಿ ವೆಂಕಟೇಶ್ವರ ದರ್ಶನ ಪಡೆದ ಪಲಿಮಾರು ಶ್ರೀಗಳನ್ನು, ಪಲಿಮಾರಿನಿಂದ ಉಡುಪಿಯ ಜೋಡುಕಟ್ಟೆಗೆ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು.ಇದೇ ಮೊದಲ ಬಾರಿಗೆ ಪಲಿಮಾರಿನಿಂದ ಉಡುಪಿಗೆ ಆಗಮಿಸುವ ದಾರಿ ಮಧ್ಯೆಯ ಊರುಗಳಾದ ಎರ್ಮಾಳು, ಉಚ್ಚಿಲ, ಕಾಪು, ಪಾಂಗಾಳ ಮತ್ತು ಕಟಪಾಡಿಯಲ್ಲಿ ಪಲಿಮಾರು ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.ತಟ್ಟಿರಾಯ, ಹುಲಿ ವೇಷ ಕುಣಿತ, ನಗಾರಿ, ಡೊಳ್ಳುಕುಣಿತ, ವೀರಗಾಶೆ, ಸೃಷ್ಟಿಗೊಂಬೆ ಬಳಗ, ಚಿಲಿಪಿಲಿ ಗೊಂಬೆ, ಮಹಿಳಾ ಚೆಂಡೆ, ಕೇರಳದ ಚೆಂಡೆ, ಸಿಂಗಾರಿ ಮೇಳ, ನಂದಿಧ್ವಜ, ಪಕ್ಕಿನಿಶಾನೆ, ತುಳುನಾಡ ವಾದ್ಯ, ಲಂಬಾಣಿ, ಭಜನ ತಂಡಗಳು, ಉತ್ತರ ಕರ್ನಾಟಕದ ಹಗಲು ವೇಷ ಮುಂತಾದ ಸಾಂಸ್ಕೃತಿಕ - ಕಲಾ ವೈಭವ ಮೆರವಣಿಗೆಯಲ್ಲಿ ಸಾಗಿ ಬಂತು.
Udupi Paryaya "Pura Pravesha" of Vidhyadeesha Theertha Swamiji of Palimar Mutt. Paryaya is a religious ritual which takes place once 2 year in Sri Krishna Matha of Udupi. The pooja and administration of Krishna Matha is distributed among the Swamijis of Ashta Matha's established by Dvaitha philosopher Sri Madhvacharya.

Trending Videos - 23 April, 2024

RELATED VIDEOS

Recent Search - April 23, 2024