25-12-2018 : ಮಂಗಳವಾರದ ದಿನ ಭವಿಷ್ಯ | Boldsky

By : Boldsky

Published On: 2018-12-24

88 Views

07:51

ಬದುಕೇ ಹಾಗೇ ದಿನವೂ ಒಂದೊಂದು ಹೊಸ ತಿರುವನ್ನು ಪಡೆದುಕೊಳ್ಳುತ್ತಲಿರುತ್ತದೆ. ಹೊಸ ಹೊಸ ಅನುಭವಗಳು ಜೀವನದ ಸಾರ್ಥಕತೆಯನ್ನು ತೋರಿಸುತ್ತವೆ. ಕಷ್ಟಗಳು ಭದುಕಿನ ನಿಜಾರ್ಥವನ್ನು ತಿಳಿಸುತ್ತದೆಯಾದರೆ ಸಂತೋಷಗಳು ಜೀವನದ ಭರವಸೆಯನ್ನು ಹೆಚ್ಚಿಸುತ್ತವೆ. ಕಷ್ಟ-ಸುಖ ಎನ್ನುವ ಎರಡು ವಿಚಾರಗಳು ಸಹ ಬದುಕಲ್ಲಿ ಛಲದ ಭಾವವನ್ನು ಹೆಚ್ಚಿಸುತ್ತವೆ. ಪ್ರತಿ ನಿಮಿಷಗಳಲ್ಲಿ ಉಂಟಾಗುವ ಬದಲಾವಣೆಗಳು ಬದುಕಿನ ತಿರುವನ್ನೇ ಬದಲಿಸಿ ನಮ್ಮ ಭವಿಷ್ಯವನ್ನು ನಿರ್ಧರಿಸುವುದು. ಮಂಗಳವಾರ ಎಂದರೆ ದೇವಿಯ ಆರಾಧನೆಗೆ ಶ್ರೇಷ್ಠವಾದ ದಿನ. ಇಂತಹ ಒಂದು ಶುಭದಿನ ಎಲ್ಲರ ಜೀವನದಲ್ಲೂ ಮಂಗಳಕರವಾದ ಘಟನೆ ನಡೆಯಲಿ, ಬದುಕಲ್ಲಿ ಹೆಚ್ಚು ಸಂತೋಷದ ಕ್ಷಣಗಳೇ ತುಂಬಿರಲಿ ಎನ್ನುವುದೇ ಬೋಲ್ಡ್ ಸ್ಟೈನ ಆಶಯ. ಇನ್ನು ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಈ ದಿನದ ಭವಿಷ್ಯ ತಿಳಿಯಲು ವಿಡಿಯೋ ನೋಡಿ

Trending Videos - 19 April, 2024

RELATED VIDEOS

Recent Search - April 19, 2024