ತಮಿಳಿನ ಸೂಪರ್ ಸ್ಟಾರ್ ವಿಜಯ್ ಜೊತೆ ಶ್ರದ್ಧಾ ಶ್ರೀನಾಥ್ ನಾಯಕಿ | Filmibeat Kannada

By : Filmibeat Kannada

Published On: 2017-12-06

682 Views

02:26

'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ 'ಯು ಟರ್ನ್' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಶ್ರದ್ಧಾ ಶ್ರೀನಾಥ್. ಮೊದಲ ಚಿತ್ರದಲ್ಲೇ ನೋಡುಗರನ್ನ ಮೋಡಿ ಮಾಡಿದ ಶ್ರದ್ಧಾ ಶ್ರೀನಾಥ್ ಮೂಗುತಿ ಸುಂದರಿ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದರು. ಎರಡೇ ವರ್ಷದಲ್ಲಿ ಹತ್ತು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನ ಗಳಿಸಿರುವ ಶ್ರದ್ಧಾ ಶ್ರೀನಾಥ್, ಈಗ ತಮಿಳಿನ ಸ್ಟಾರ್ ನಾಯಕನ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಸದ್ಯದ ಸುದ್ದಿಯ ಪ್ರಕಾರ 'ಇಳಯದಳಪತಿ ವಿಜಯ್' ಅಭಿನಯದ 62ನೇ ಚಿತ್ರಕ್ಕೆ ಶ್ರದ್ದಾ ನಾಯಕಿಯಾಗಿದ್ದಾರಂತೆ. ಈ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಆಗೋದಕ್ಕೂ ಕೆಲವು ಕಾರಣಗಳಿವೆ...ತಮಿಳಿನ 'ಕಾಟ್ರು ವೆಲೆಯಾಡೈ' (Kaatru Veliyidai) 'ಇವನ್ ತಂಥಿರಾನ್' ಹಾಗೂ 'ವಿಕ್ರಂವೇದ' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದರು. ತಮಿಳು ಚಿತ್ರರಂಗದಲ್ಲೂ ಈಕೆಯ ಅಭಿನಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಈಗ ಮತ್ತೆ ತಮಿಳಿನ ಸ್ಟಾರ್ ನಟನಿಗೆ ತೆರೆ ಮೇಲೆ ಜೋಡಿಯಾಗುವ ಅವಕಾಶ ಸಿಕ್ಕಿದೆ ಎನ್ನೋ ಸುದ್ದಿ ಕೇಳಿ ಬರ್ತಿದೆ.
The 62nd movie of Ilaiyadalapathy Vijay is likely to be a Kannada actress Shraddha Srinath Heroine. The film will be directed by AR Murugadoss.

Trending Videos - 29 April, 2024

RELATED VIDEOS

Recent Search - April 29, 2024