ಹೊಸ ವರ್ಷ ವಿಶೇಷ : ಮೈಸೂರಿನ ದೇವಸ್ಥಾನದಲ್ಲಿ 2 ಲಕ್ಷ ಲಡ್ಡು ವಿತರಣೆ | Oneindia Kannada

By : Oneindia Kannada

Published On: 2017-12-27

236 Views

00:54

ಹೊಸ ವರ್ಷದ ಪ್ರಯುಕ್ತ ಮೈಸೂರಿನ ಯೋಗಾನರಸಿಂಹ ದೇವಸ್ಥಾನವು ತಿರುಪತಿಯಲ್ಲಿ ಮಾಡುವ ರೀತಿಯಲ್ಲಿ 2 ಲಕ್ಷ ಲಾಡುಗಳನ್ನು ಸಾರ್ವಜನಿಕರಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. 1994ರಿಂದಲೂ ನೂತನ ವರ್ಷದ ಸಂಭ್ರಮದಲ್ಲಿ ದೇವಸ್ಥಾನದ ವತಿಯಿಂದ ಲಾಡುಗಳನ್ನು ವಿತರಿಸಲಾಗುತ್ತಿದೆ. ಆರಂಭದಲ್ಲಿ 1 ಸಾವಿರ ಲಾಡು ವಿತರಣೆ ಮಾಡಲಾಗಿತ್ತು. ನಾಲ್ಕು ವರ್ಷಗಳಿಂದ 1 ಲಕ್ಷ ಲಾಡುಗಳನ್ನು ನೀಡಲಾಗುತ್ತಿತ್ತು. ಈ ವರ್ಷ 2 ಲಕ್ಷ ಲಾಡುಗಳನ್ನು ವಿತರಿಸಲು ಸಿದ್ಧತೆ ಮಾಡಲಾಗಿದೆ. 1500 ಗ್ರಾಂ ತೂಕದ 5 ಸಾವಿರ ಲಾಡು, 100 ಗಾಂ ತೂಕದ 2 ಲಕ್ಷ ಲಾಡುಗಳನ್ನು ವಿತರಿಸಲಾಗುವುದು.ಈ ಕುರಿತಾಗಿ ಮಾಹಿತಿ ನೀಡಿದ ಭಾಷ್ಯಂ ಸ್ವಾಮೀಜಿ, ಜನವರಿ 1ರಂದು ಯೋಗಾನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಿರುಪತಿ ಮಾದರಿಯ 2 ಲಕ್ಷ ಲಾಡುಗಳನ್ನು ಬೆಳಗ್ಗೆ 4ರಿಂದ ಮಧ್ಯಾಹ್ನ 12ರವರೆಗೆ ವಿತರಿಸಲಾಗುವುದು ಎಂದು ತಿಳಿಸಿದರು.
On new year occasion Mysuru Yoga Narasimha temple administration decides to distribute 2 lakh Laddus like Tirupati Prasadam to devotees.

Trending Videos - 3 June, 2024

RELATED VIDEOS

Recent Search - June 3, 2024