ರಮ್ಯಾ ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರಾ? ತಾಯಿ ರಂಜಿತಾ ಹೇಳೋದೇನು? | Oneindia Kannada

By : Oneindia Kannada

Published On: 2018-09-15

183 Views

03:06

Former MP from Mandya Ramya will not contest Mandya Lok Sabha by election said her mother Ranjitha. I was also keen to contest from Mandya but, Party high command has decided not to field any candidate and to continue alliance with JDS, she added.


ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅವರನ್ನು ಮತ್ತೊಮ್ಮೆ ತಮ್ಮ ಕ್ಷೇತ್ರದಿಂದ ಸಂಸದೆಯಾಗಿ ನೋಡಲು ಅಲ್ಲಿನ ಜನತೆ ಬಯಸಿದ್ದಾರೋ ಇಲ್ಲವೋ, ಆದರೆ, ಅವರ ತಾಯಿ ರಂಜಿತಾ ಮಾತ್ರ ಮಂಡ್ಯ ಕ್ಷೇತ್ರವನ್ನು ತಮ್ಮ ಕುಟುಂಬದವರು ಉಳಿಸಿಕೊಳ್ಳಬೇಕು ಎಂಬ ಬಯಕೆ ಹೊಂದಿದ್ದಾರೆ. ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಸದ್ಯ ಎಐಸಿಸಿಯಿಂದ ಉನ್ನತ ಸ್ಥಾನ ಪಡೆದು, ಸಾಮಾಜಿಕ ಜಾಲ ತಾಣಗಳ ಉಸ್ತುವಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ, ಕಾರ್ಯಕರ್ತರಿಗೆ ಅವರನ್ನು ಮತ್ತೊಮ್ಮೆ ಸಂಸದರಾಗಿ ಕಾಣುವ ಬಯಕೆ ಇದೆ ಎಂದು ರಮ್ಯಾ ಅವರ ತಾಯಿ ರಂಜಿತಾ ಅವರು ಹೇಳುತ್ತಾ ಬಂದಿದ್ದಾರೆ. ಈಗ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ಸ್ಪರ್ಧೆ ವಿಚಾರವಾಗಿ ಎದ್ದಿದ್ದ ಕುತೂಹಲದ ಪ್ರಶ್ನೆಗೆ ರಮ್ಯಾ ಅವರ ತಾಯಿ ರಂಜಿತಾ ಅವರು ಸ್ಪಷ್ಟನೆ ನೀಡಿದ್ದಾರೆ.

Trending Videos - 28 April, 2024

RELATED VIDEOS

Recent Search - April 28, 2024