Big Bulletin | ಒಂದೇ ದಿನ 2 ದಾಳ ಪ್ರಯೋಗಿಸಿದ ಡಿಕೆ ಶಿವಕುಮಾರ್ | HR Ranganath | July 19, 2022

By : Public TV

Published On: 2022-07-19

21 Views

22:55

ಕೂಸು ಹುಟ್ಟದೇ ಕುಲಾವಿ ಹೊಲೆಸಿದ್ರು ಅನ್ನೋ ಹಾಗೇ, ಇನ್ನೂ ಚುನಾವಣೆ ನಡೆದಿಲ್ಲ. ಕಾಂಗ್ರೆಸ್ ಪಕ್ಷ ಗೆದ್ದೂ ಇಲ್ಲ. ಆದ್ರೆ, ಈಗಾಗಲೇ ಆ ಪಕ್ಷದಲ್ಲಿ ಸಿಎಂ ಸ್ಥಾನಕ್ಕಾಗಿ ಫೈಟ್ ಜೋರಾಗಿ ನಡೀತಿದೆ.. ಸಿಎಂ ಕುರ್ಷಿ ಮೇಲೆ ಪೈಪೋಟಿಗೆ ಬಿದ್ದವರಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈಗಿನಿಂದ್ಲೇ ಟವೆಲ್ ಹಾಕೋಕೆ ಕಸರತ್ತು ನಡೆಸಿದ್ದಾರೆ. ಮೊನ್ನೆ ಬಾಗಲಕೋಟೆಯ ಇಳಕಲ್‍ನಲ್ಲಿ ಸಿದ್ದರಾಮಯ್ಯ ನೇಕಾರರ ಜೊತೆ ಮಾತಾಡ್ತಾ ಮತ್ತೆ ಸಿಎಂ ಆಗೋ ಆಸೆ ಹೊರಹಾಕಿದ್ರು. ಈ ಬೆನ್ನಲ್ಲೇ ಡಿಕೆ ಶಿವಕುಮಾರ್ ಬೆಂಗಳೂರಿನ ಸಮುದಾಯದ ಕಾರ್ಯಕ್ರಮದಲ್ಲಿ ಸಿಎಂ ಆಗೋ ಬಯಕೆ ವ್ಯಕ್ತಪಡಿಸಿದ್ರು. ಇದಕ್ಕೆ ನಿನ್ನೆ ಸಮರ್ಥನೆ ಮಾಡಿಕೊಂಡಿದ್ರು ಸಹ. ಇವತ್ತು ಕೂಡ ಕೆಪಿಸಿಸಿ ಅಧ್ಯಕ್ಷರು ಪರೋಕ್ಷವಾಗಿ, ಸಿಎಂ ಆಗೋ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನಾನು ಸನ್ಯಾಸಿ ಅಲ್ಲ. ಕಾವಿ ತೊಟ್ಟಿಲ್ಲ.. ನಾನು ಖಾದಿ ತೊಟ್ಟಿದ್ದೇನೆ.. ಕಾಂಗ್ರೆಸ್‍ನಲ್ಲಿ ಎಸ್‍ಎಂ ಕೃಷ್ಣ ನಂತರ ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಅವಕಾಶ ಬಂದಿದೆ. ಅದನ್ನು ಮಿಸ್ ಮಾಡಿಕೊಳ್ಳಬೇಡಿ ಅಂತಾ ಸಮುದಾಯದವರಿಗೆ ಹೇಳಿದ್ದೇನೆ. ಸಮುದಾಯದವರು ನನ್ನ ಪರ ನಿಲ್ಲಲ್ಲಿ ಅಂತಾ ಅವರಿಗೆ ಮನದಟ್ಟು ಮಾಡಿದ್ದೇನೆ. ಮೊದಲು ಸರ್ಕಾರ ಬರಬೇಕು. ಸಿಎಂ ಆಗುವುದು ಆಮೇಲೆ.. ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ.
ನನ್ನ ಬೆನ್ನಿಗೆ ಒಕ್ಕಲಿಗರು ಮಾತ್ರವಲ್ಲ ಎಲ್ಲಾ ಸಮಯದಾಯ ನಿಲ್ಲಲಿ ಎಂದು ಕೋರಿದ್ದಾರೆ. ಅಲ್ಲದೇ, ಚುನಾವಣೆಲಿ ಕಾಂಗ್ರೆಸ್ ಗೆದ್ರೇ ಕೆಪಿಸಿಸಿ ಅಧ್ಯಕ್ಷರು ಸಿಎಂ ಆಗೋದು ಸಂಪ್ರದಾಯ.. ಎಸ್‍ಎಂ ಕೃಷ್ಣ ಕೂಡ ಅದೇ ರೀತಿ ಸಿಎಂ ಆಗಿದ್ರು. ಈಗ ಅಂಥಾದ್ದೇ ಅವಕಾಶ ಸಿಕ್ಕಿದೆ ಎಂದು ಡಿಕೆ ಶಿವಕುಮಾರ್ ಪದೇ ಪದೇ ಹೇಳಿದ್ರು. ಡಿಕೆಶಿ ಮತ್ತು ಸಿದ್ದರಾಮಯ್ಯನವರ ಸಿಎಂ ಜಪದ ಬಗ್ಗೆ ಸ್ವತಃ ಕಾಂಗ್ರೆಸ್ ನಾಯಕರೇ ಬೇಸರ ವ್ಯಕ್ತಪಡಿಸಿದ್ದಾರೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಎಐಸಿಸಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಕೃಷ್ಣಬೈರೇಗೌಡ, ಪಕ್ಷದಲ್ಲಿ ಸಿದ್ದರಾಮೋತ್ಸವ, ಆಗಸ್ಟ್ 15ರ ನಡಿಗೆ ಬಗ್ಗೆಯಷ್ಟೇ ಚರ್ಚೆ ನಡೀತಿದೆ. ಜಿಎಸ್‍ಟಿ ಹೇರಿಕೆ, ಬೆಲೆ ಏರಿಕೆ ಖಂಡಿಸಿ ಪಕ್ಷ ಯಾವುದೇ ಪ್ರತಿಭಟನೆಗೆ ಮುಂದಾಗಿಲ್ಲ. ಪಕ್ಷದ ಹಿತ ಯಾರಿಗೂ ಮುಖ್ಯವಾಗಿಲ್ಲ ಎಂದು ಇನ್ನೂ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಪರೋಕ್ಷವಾಗಿ ಡಿಕೆಶಿಗೆ ಬಂಬಲ ಸೂಚಿಸಿದ್ದಾರೆ.

#publictv #bigbulletin #hrranganath

Trending Videos - 16 May, 2024

RELATED VIDEOS

Recent Search - May 16, 2024