ಅಕ್ಟೋಬರ್ 29ರಂದು ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಭೇಟಿ | ಭಕ್ತರಿಗೆ ಪ್ರವೇಶ ನಿಷೇಧ | Oneindia Kannada

ಅಕ್ಟೋಬರ್ 29ರಂದು ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಭೇಟಿ | ಭಕ್ತರಿಗೆ ಪ್ರವೇಶ ನಿಷೇಧ | Oneindia Kannada

ಪ್ರಧಾನಮಂತ್ರಿ ನರೇಂದ್ರ ಮೋದಿ ನಾಡಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಧರ್ಮಸ್ಥಳಕ್ಕೆ ಭಾನುವಾರ (ಅ 29) ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯೊಂದನ್ನು ಹೊರಡಿಸಿದೆ. ಅ 29ಕ್ಕೆ ಬೆಳಗ್ಗೆ ದೇವಾಲಯಕ್ಕೆ ಮೋದಿ ಭೇಟಿ ನೀಡುತ್ತಿರುವುದರಿಂದ, ಶನಿವಾರ (ಅ 28) ಮಧ್ಯಾಹ್ನ ಎರಡು ಗಂಟೆಯಿಂದ, ಅ 29 ಮಧ್ಯಾಹ್ನ ಎರಡು ಗಂಟೆಯವರೆಗೆ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ಭದ್ರತೆಯ ದೃಷ್ಟಿಯಿಂದ ನಿರ್ಬಂಧ ಹೇರಬೇಕಾಗಿರುವುದರಿಂದ, 24ಗಂಟೆ ದೇವಾಲಯಕ್ಕೆ ಪ್ರವೇಷ ನಿಷಿದ್ದಿಸಲಾಗಿದೆ, ಭಕ್ತರು ಸಹಕರಿಸಬೇಕಾಗಿ ದೇವಾಲಯ ಮನವಿ ಮಾಡಿದೆ. ಕಾರ್ತಿಕ ಮಾಸ ಮತ್ತು ಅ30 ರಂದು ಎರಡನೇ ಕಾರ್ತಿಕ ಸೋಮವಾರವಿರುವುದರಿಂದ ದೇವಾಲಯದಲ್ಲಿ ಭಾರೀ ಜನಸಂದಣಿ ಇರುವುದು ವಾಡಿಕೆ. ಹಾಗಾಗಿ, ಒಂದು ದಿನ ಮುಂಚಿತವಾಗಿ ದೇವಾಲಯಕ್ಕೆ ಬರುವವರಿಗೆ ಅನಾನುಕೂಲ ಆಗದಿರಲು, ದೇವಾಲಯ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ. br Prime Minister Narendra Modi visit to Dharmathala Manjunathaswamy temple on Oct 29th.


User: Oneindia Kannada

Views: 323

Uploaded: 2017-10-26

Duration: 02:13