Bigg Boss Kannada Season 5: ಬಿಗ್ ಬಾಸ್ ಗೆ ಐ ಹೇಟ್ ಯು ಎಂದ ಅನುಪಮಾ ಗೌಡ | Filmibeat Kannada

Bigg Boss Kannada Season 5: ಬಿಗ್ ಬಾಸ್ ಗೆ ಐ ಹೇಟ್ ಯು ಎಂದ ಅನುಪಮಾ ಗೌಡ | Filmibeat Kannada

Bigg Boss Kannada 5: Week 4: Riaz Basha becomes captain while Anupama Gowda blames Bigg Boss for cheating. br br 'ಬಿಗ್ ಬಾಸ್' ಮೋಸ ಮಾಡಿದ್ರಾ.!? ಅನುಪಮಾ ಗೌಡ ಮಾಡಿದ್ದು ಇದೆಂಥಾ ಆರೋಪ.?! ''ಬಿಗ್ ಬಾಸ್' ಮೋಸ ಮಾಡಿದ್ದಾರಂತೆ. ಚಟುವಟಿಕೆಯಲ್ಲಿ ಗೆದ್ದವರನ್ನು ಕ್ಯಾಪ್ಟನ್ ಮಾಡದೆ, ಬೇರೆಯವರನ್ನು ಕ್ಯಾಪ್ಟನ್ ಮಾಡಿದ 'ಬಿಗ್ ಬಾಸ್' ನಿರ್ಧಾರ ಸರಿಯಿಲ್ಲವಂತೆ'' - ಹಾಗಂತ ನಾವು ಹೇಳ್ತಾಯಿಲ್ಲ. ಬದಲಾಗಿ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿಯಾಗಿರುವ ಅನುಪಮಾ ಗೌಡ ಹೇಳಿದ್ದಾರೆ.! ಕ್ಯಾಪ್ಟನ್ ಆಯ್ಕೆಗಾಗಿ ನೀಡಿದ್ದ ಟಾಸ್ಕ್ ನಲ್ಲಿ ಅನುಪಮ ಗೌಡ ವಿಜೇತರಾದರೂ, ಅವರು ಕ್ಯಾಪ್ಟನ್ ಆಗಲಿಲ್ಲ. ಹೀಗಾಗಿ ''ಇದು ಮೋಸ'' ಅಂತ ಅನುಪಮಾ ಗೌಡ ಆರೋಪ ಮಾಡಿದ್ದಾರೆ. ಸಾಲದಕ್ಕೆ 'ಬಿಗ್ ಬಾಸ್'ಗೆ ''ಐ ಹೇಟ್ ಯು'' ಎಂದಿದ್ದಾರೆ.ಈ ವಾರದ ಮನೆಯ ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ಒಂದು ಚಟುವಟಿಕೆ ನೀಡಿದ್ದರು. ಗಾರ್ಡನ್ ಏರಿಯಾದಲ್ಲಿ ಹದಿಮೂರು ಬ್ಲಾಕ್ ಗಳಿದ್ದು, ಸ್ಪರ್ಧಿಗಳಿಗೆ ಸಿಕ್ಕ ಚೀಟಿಯ ನಂಬರ್ ಅಧಾರದಲ್ಲಿ ನಿಂತು, ನೀಡಲಾದ ತುಣುಕುಗಳನ್ನ ಉಪಯೋಗಿಸಿ ಭಾವಚಿತ್ರವೊಂದನ್ನು ರಚಿಸಬೇಕಿತ್ತು. ಮನೆಯ ಒಬ್ಬ ಸದಸ್ಯರ ಭಾವಚಿತ್ರವನ್ನ ಯಾವುದೇ ಒಬ್ಬ ಸದಸ್ಯ ಪೂರ್ಣಗೊಳಿಸಿದಾಗ ಚಟುವಟಿಕೆ ಅಲ್ಲಿಗೆ ಮುಗಿಯುತ್ತಿತ್ತು.


User: Filmibeat Kannada

Views: 2

Uploaded: 2017-11-07

Duration: 03:01