ಖಾಕಿ ಧರಿಸಿ ಪುಂಡರನ್ನ ಬೆಂಡೆತ್ತಲು ತಯಾರಾದ ರಾಗಿಣಿ | Oneindia Kannada

ಖಾಕಿ ಧರಿಸಿ ಪುಂಡರನ್ನ ಬೆಂಡೆತ್ತಲು ತಯಾರಾದ ರಾಗಿಣಿ | Oneindia Kannada

Ragini is ready in police uniform to teach the lesson to bullies br br ನಟಿ ರಾಗಿಣಿ ಹ್ಯಾಟ್ರಿಕ್ ಬಾರಿಸುವುದಕ್ಕೆ ಸಜ್ಜಾಗಿದ್ದಾರೆ. ರಾಗಿಣಿ ಹ್ಯಾಟ್ರಿಕ್ ಬಾರಿಸುತ್ತಿರುವುದು ಸಿನಿಮಾದಲ್ಲಿ. ಹೌದು, 'ಮುಸ್ಸಂಜೆ ಮಹೇಶ್' ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ರಾಗಿಣಿ ಅಭಿನಯಿಸುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಚಿತ್ರ ಸೆಟ್ಟೇರಲಿದೆ. ನಿರ್ದೇಶಕ ಮಹೇಶ್ ನಿರ್ದೇಶನದ 'ನಾನೇ ನೆಕ್ಸ್ಟ್ ಸಿ.ಎಂ' ಹಾಗೂ ಆದಿತ್ಯ ಮತ್ತು ರಾಗಿಣಿ ಅಭಿನಯದ ಚಿತ್ರವನ್ನು ಮಹೇಶ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.ರಾಗಿಣಿ ಜೊತೆಯಲ್ಲಿ ಸಂಯುಕ್ತ, ನಕ್ಷತ್ರ, ಪ್ರಥಮ ಹಾಗೂ ಮೇಘನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕದ ಸುತ್ತ-ಮುತ್ತ ಚಿತ್ರೀಕರಣ ನಡೆಯಲಿದ್ದು, 'ಎಂ.ಎಂ.ಸಿ.ಹೆಚ್' ಅಂತ ಸಿನಿಮಾಗೆ ಟೈಟಲ್ ಇಡಲಾಗಿದೆ. ಒಟ್ಟಾರೆ ಈಗಾಗಲೇ ಖಾಕಿ ಧರಿಸಿ ತನ್ನ ಆಕ್ಟಿಂಗ್ ಖದರ್ ತೋರಿಸಿರುವ ನಟಿ ರಾಗಿಣಿ ಈ ಸಿನಿಮಾದಲ್ಲಿಯೂ ಮಿಂಚಲಿದ್ದಾರೆ. br ಸದ್ಯ ಸೆಟ್ಟೇರಬೇಕಿರುವ ಸಿನಿಮಾದಲ್ಲಿ ರಾಗಿಣಿ ಖಾಕಿ ಧರಿಸಿ ಪುಂಡರಿಗೆ ಬೆಂಡೆತ್ತಲಿದ್ದಾರಂತೆ. 'ಇನ್ವೆಸ್ಟಿಗೇಷನ್ ಆಫೀಸರ್' ಪಾತ್ರದಲ್ಲಿ ತುಪ್ಪದ ಬೆಡಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇರುವ ಚಿತ್ರವಾಗಿದ್ದು ಸಿನಿಮಾ ತಂಡ ರಾಗಿಣಿ ಅವರ ಫಸ್ಟ್ ಲುಕ್ ಅನ್ನ ರಿಲೀಸ್ ಮಾಡಿದೆ.


User: Filmibeat Kannada

Views: 193

Uploaded: 2017-11-20

Duration: 01:31