ಅಮೆರಿಕನ್ನರು ಕನ್ನಡ ಕಲಿಯಲು ಸ್ಪೂರ್ತಿಯಾದ ರಾಕಿಂಗ್ ಸ್ಟಾರ್ ಯಶ್ | Filmibeat Kannada

ಅಮೆರಿಕನ್ನರು ಕನ್ನಡ ಕಲಿಯಲು ಸ್ಪೂರ್ತಿಯಾದ ರಾಕಿಂಗ್ ಸ್ಟಾರ್ ಯಶ್ | Filmibeat Kannada

Rocking Star Yash's American Fan speaks about Yash and his love for Kannada. br br ಅಮೇರಿಕಾದ ಯಶ್ ಅಭಿಮಾನಿ, ರಾಕಿಂಗ್ ಸ್ಟಾರ್ ಬಗ್ಗೆ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಚಾರ. ರಾಕಿಂಗ್ ಸ್ಟಾರ್ ಯಶ್.... ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಿರುವ ನಾಯಕ ನಟ. ರಾಕಿಂಗ್ ಸ್ಟಾರ್ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯದಲ್ಲಿಯೂ ಗುರುತಿಸಿಕೊಂಡಿದ್ದು, ಯುವಕರಿಂದ ಹಿರಿಯರ ತನಕವೂ ರಾಕಿಂಗ್ ಸ್ಟಾರ್ ರನ್ನ ಇಷ್ಟ ಪಡದೇ ಇರುವ ಜನರಿಲ್ಲ. ಇಷ್ಟು ದಿನ ರಾಜ್ಯದಲ್ಲಿ, ಹೊರ ರಾಜ್ಯದಲ್ಲಿ ಮಾತ್ರ ಯಶ್ ಅಭಿಮಾನಿಗಳಿದ್ದಾರೆ ಎನ್ನುವ ಊಹೆ ಇತ್ತು. ಆದ್ರೆ ಈಗ ರಾಕಿಂಗ್ ಸ್ಟಾರ್ ಗೆ ಬೇರೆ ದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಅಮೇರಿಕಾದ ಅಭಿಮಾನಿಯೊಬ್ಬರು ರಾಕಿಂಗ್ ಸ್ಟಾರ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ. ಯಾರು ಆ ಅಭಿಮಾನಿ.? ಯಶ್ ಫ್ಯಾನ್ ಆಗಲು ಕಾರಣವೇನು.? ಯಶ್ ಯಾಕೆ ಎಲ್ಲರಿಗಿಂತ ವಿಭಿನ್ನ.? ಇವೆಲ್ಲದರ ಬಗ್ಗೆ ಮಾತನಾಡಿದ್ದಾರೆ. ಲೀ ಎಂ ಸೆಂಟ್ರಾಚಿಯೊ... ಮೂಲತ ಅಮೇರಿಕಾದ ನಿವಾಸಿ. ಬಿಡುವಿನ ಸಮಯದಲ್ಲಿ ಯಶ್ ಅಭಿನಯದ 'ಗೂಗ್ಲಿ' ಸಿನಿಮಾವನ್ನ ನೋಡಿ ಸಖತ್ ಇಂಪ್ರೆಸ್ ಆಗಿದ್ದಾರೆ. ಹಿಂದಿಯಲ್ಲಿ ಡಬ್ ಆಗಿದ್ದ ಚಿತ್ರವನ್ನ ಮೆಚ್ಚಿಕೊಂಡು ಈಗ ರಾಕಿಂಗ್ ಸ್ಟಾರ್ ಯಶ್ ರ ಅಪ್ಪಟ ಅಭಿಮಾನಿಯಾಗಿದ್ದಾರೆ.


User: Filmibeat Kannada

Views: 1.4K

Uploaded: 2017-11-23

Duration: 14:04