ದೆಹಲಿ ಬಗ್ಗುಬಡಿದು ಅಗ್ರಸ್ಥಾನಕ್ಕೇರಿದ ಬೆಂಗಳೂರು | Oneindia Kannada

ದೆಹಲಿ ಬಗ್ಗುಬಡಿದು ಅಗ್ರಸ್ಥಾನಕ್ಕೇರಿದ ಬೆಂಗಳೂರು | Oneindia Kannada

ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಇಂಡಿಯನ್ ಸೂಪರ್‌ ಲೀಗ್‌(ಐಎಸ್ಎಲ್) ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ತಂಡ ಭರ್ಜರಿ ಜಯ ದಾಖಲಿಸಿತು. ಬಿಎಫ್ ಸಿ ವಿರುದ್ಧ ಡೆಲ್ಲಿ ಡೈನಾಮೊಸ್ 4-1 ಅಂತರದ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಬಿಎಫ್ ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೇ ಮೊದಲ ಬಾರಿಗೆ ಐಎಸ್ಎಲ್ ನಲ್ಲಿ ಆಡುತ್ತಿರುವ ಬಿಎಫ್ಸಿ ಪರ ಎರಿಕ್‌ ಪರ್ತಾಲು (24, 45ನೇ ನಿಮಿಷ), ಲೆನಿ ರಾಡ್ರಿಗಸ್‌ (57ನೇ ನಿ) ಮತ್ತು ಮಿಕು (867ನೇ ನಿ) ಬಿಎಫ್‌ಸಿ ಪರ ಗೋಲು ಗಳಿಸಿದರು. ಡೆಲ್ಲಿ ಪರ ಕಲು ಉಚೆ (86ನೇ ನಿ) ಏಕೈಕ ಗೋಲು ಬಾರಿಸಿದರು.ಬೆಂಗಳೂರು ಎಫ್ ಸಿ ತಂಡ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಎಫ್ ಸಿ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು br br Bangalore FC on their first season have kept crowd on their feet with brilliant performances .


User: Oneindia Kannada

Views: 139

Uploaded: 2017-11-27

Duration: 01:18