ಎಲ್ ಕೆ ಅಡ್ವಾಣಿಯವರನ್ನ ಭೇಟಿ ಮಾಡಿದ ಒಳ್ಳೆ ಹುಡುಗ ಪ್ರಥಮ್ | Filmibeat Kannada

ಎಲ್ ಕೆ ಅಡ್ವಾಣಿಯವರನ್ನ ಭೇಟಿ ಮಾಡಿದ ಒಳ್ಳೆ ಹುಡುಗ ಪ್ರಥಮ್ | Filmibeat Kannada

Actor, Director Pratham meets L K Advani and received blessings for his next direction film br br ಬಿಲ್ಡಪ್ ಗಾಗಿ 'ಅಡ್ವಾಣಿ'ಯವರನ್ನ ಭೇಟಿ ಮಾಡಿದ ನಟ ಪ್ರಥಮ್. ಬಿಗ್ ಬಾಸ್ ರಿಯಾಲಿಟಿ ಶೋ ನಿಂದಲೇ ಪ್ರಖ್ಯಾತಿ ಪಡೆದುಕೊಂಡಿರೋ ನಟ ಹಾಗೂ ನಿರ್ದೇಶಕ ಪ್ರಥಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ಮೈಸೂರು ಮೂಲದ ಹುಡುಗಿಯನ್ನ ಮದುವೆಯಾಗುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದ ಪ್ರಥಮ್ ಈಗ ಬಿಜೆಪಿ ಪಕ್ಷದ ಬೀಷ್ಮ ಅಂತಾನೆ ಹೆಸರುಗಳಿಸಿರೋ 'ಎಲ್ ಕೆ ಅಡ್ವಾಣಿ'ಯವರನ್ನ ಭೇಟಿ ಮಾಡಿದ್ದಾರೆ. ರಿಯಾಲಿಟಿ ಶೋಗೆ ಹೋಗುವ ಮುಂಚಿನಿಂದಲೂ ರಾಜಕಾರಣಿಗಳ ಜೊತೆ ಉತ್ತಮ ಬಾಂದವ್ಯವನ್ನ ಹೊಂದಿದ್ದ ಪ್ರಥಮ್ ತಮ್ಮ ಸಿನಿಮಾಗಳಿಗೆ ರಾಜ್ಯದ ಪ್ರಮುಖ ರಾಜಕೀಯ ವ್ಯಕ್ತಿಗಳಿಂದ ಕ್ಲಾಪ್ ಮಾಡಿಸಿದ್ದರು. ಈಗ ತಾವೇ ನಿರ್ದೇಶನ ಮಾಡುತ್ತಿರುವ ಸಿನಿಮಾದ ವಿಚಾರವಾಗಿ ಅಡ್ವಾಣಿಯನ್ನ ಭೇಟಿ ಮಾಡಿದ್ದಾರೆ ಪ್ರಥಮ್.ನಟ, ನಿರ್ದೇಶಕ ಪ್ರಥಮ್ ಇತ್ತಿಚಿಗಷ್ಟೇ ಎಲ್ ಕೆ ಅಡ್ವಾಣಿಯವರನ್ನ ಬೇಟಿ ಮಾಡಿದ್ದಾರೆ. ತಾವೇ ನಿರ್ದೇಶನ ಮಾಡುತ್ತಿರುವ 'ಬಿಲ್ಡಪ್' ಪ್ರಥಮ್ ಸಿನಿಮಾದ ಕ್ಲಾಪ್ ಬೋರ್ಡ್ ಅನ್ನ ಅಡ್ವಾಣಿಯವರಿಗೆ ನೀಡಿ ಆರ್ಶೀವಾದವನ್ನ ಪಡೆದುಕೊಂಡಿದ್ದಾರೆ.


User: Filmibeat Kannada

Views: 2.1K

Uploaded: 2017-12-01

Duration: 02:29

Your Page Title