ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತೀಯರ ಪಟ್ಟಿ | Oneindia Kannada

ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತೀಯರ ಪಟ್ಟಿ | Oneindia Kannada

ಟ್ವಿಟ್ಟರ್ ನಲ್ಲಿ ಎಷ್ಟು ಫಾಲ್ಲೋರ್ಸ ಇದ್ದಾರೋ ಆತ ಅಷ್ಟೇ ಫೇಮಸ್ ಅನ್ನೋ ಕಾಲ ಬಂದಿದೆ . ಜನಪ್ರಿಯ ಸಾಮಾಜಿಕ ಜಾಲ ತಾಣ ಮೈಕ್ರೋ ಬ್ಲಾಗಿಂಗ್ ತಾಣವಾಗಿರುವ ಟ್ವಿಟ್ಟರ್ ತನ್ನ ಲೋಕದಲ್ಲಿ ಕಳೆದ ವರ್ಷ ಕಂಡ ಟ್ರೆಂಡಿಂಗ್, ಜನಪ್ರಿಯ ವ್ಯಕ್ತಿಗಳ ಟಾಪ್ 10 ಪಟ್ಟಿಯನ್ನು ಪ್ರಕಟಿಸಲು ಆರಂಭಿಸಿದೆ.ಭಾರತದಲ್ಲಿ ನಿರೀಕ್ಷೆಯಂತೆ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವವರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಇದಲ್ಲದೆ, ಅತೀ ಹೆಚ್ಚು ಟ್ವೀಟ್ ಮಾಡಿರುವ ಜಾಗತಿಕ ಚುನಾಯಿತ ಪ್ರತಿನಿಧಿಗಳ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ಹಾಗೂ ರಾಜಕಾರಣಿಗಳನ್ನು ಹೊಂದಿರುವ ಟಾಪ್ 10 ಪಟ್ಟಿಯಲ್ಲಿ ಈ ಬಾರಿ ಅಚ್ಚರಿಯೆಂಬಂತೆ ಇಬ್ಬರು ಕ್ರಿಕೆಟರ್ ಗಳು ಈ ಪಟ್ಟಿಯಲ್ಲಿ ಸೇರಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಅವರು 7ನೇ ಸ್ಥಾನದಲ್ಲಿದ್ದು, ಪಟ್ಟಿಯಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ.


User: Oneindia Kannada

Views: 62

Uploaded: 2017-12-08

Duration: 02:07