ಬಿಗ್ ಬಾಸ್ ಕನ್ನಡ ಸೀಸನ್ 5 : ಬಿಗ್ ಮನೆಗೆ ಇಬ್ಬರು ವಿಶೇಷ ಅತಿಥಿಗಳ ಎಂಟ್ರಿ | Filmibeat Kannada

By : Filmibeat Kannada

Published On: 2017-12-12

1 Views

01:50

'ಬಿಗ್ ಬಾಸ್' ಕನ್ನಡ ಮನೆಯಲ್ಲಿ ಪ್ರತಿವಾರ ಒಬ್ಬೊಬ್ಬರು ಎಲಿಮಿನೇಟ್ ಆಗಿ ಹೊರಗೆ ಬರ್ತಿದ್ರೆ, ಮತ್ತೊಂದೆಡೆ ಇನ್ನೊಬ್ಬರು ಎಂಟ್ರಿ ಕೊಡ್ತಿದ್ದಾರೆ. ಕಳೆದ ವಾರವಷ್ಟೇ ನಟಿ ವೈಷ್ಣವಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಮನೆ ಪ್ರವೇಶ ಮಾಡಿದ್ದರು. ಆದ್ರೆ, ಗಾಯದ ಸಮಸ್ಯೆಯಿಂದ ಬಿಗ್ ಬಾಸ್ ನಿಂದ ಹೊರನಡೆದರು. ಅದಕ್ಕೂ ಮುಂಚೆ ಬಿಗ್ ಬಾಸ್ ನ ಹಲವು ಮಾಜಿ ಸ್ಪರ್ಧಿಗಳು ಮನೆಯೊಳಗೆ ಹೋಗಿ ಬಂದಿದ್ದರು. ಶಾಲಿನಿ, ಕೀರ್ತಿ, ಶೀತಲ್ ಶೆಟ್ಟಿ, ಅಕುಲ್ ಬಾಲಾಜಿ ಎಲ್ಲರೂ ಸರ್ಪ್ರೈಸ್ ಆಗಿ ಹೋಗಿ ಬಂದಿದ್ದರು.ಇದೀಗ, ಅಂತಹ ಸರ್ಪ್ರೈಸ್ ಅತಿಥಿಗಳಿಬ್ಬರು ಮನೆ ಪ್ರವೇಶ ಮಾಡಿದ್ದಾರೆ. ಇವರ ಸ್ಪರ್ಧಿನಾ ಅಥವಾ ಅತಿಥಿನಾ ಎಂಬುದರ ಬಗ್ಗೆ ಮಾಹಿತಿ ಇಲ್ಲವಾದರೂ, ಕುತೂಹಲ ಮಾತ್ರ ಹೆಚ್ಚಾಗಿದೆ. ಹಾಗಿದ್ರೆ, ಮನೆಯೊಳಗೆ ಹೋಗಿರುವ ಇಬ್ಬರು ಯಾರು? ಡಿಸೆಂಬರ್ 12ನೇ ತಾರೀಖಿನ ಎಪಿಸೋಡ್ ನಲ್ಲಿ ಬಿಗ್ ಬಾಸ್ ಮನೆಯೊಳಗೆ ಇಬ್ಬರು ನಟಿಯರು ಸರ್ಪ್ರೈಸ್ ಎಂಟ್ರಿಕೊಟ್ಟಿದ್ದಾರೆ. ಇಬ್ಬರು ಮುಖ ಪರಿಚಯ ಮಾಡದೇ ಹೋದರು, ಆ ಇಬ್ಬರ ದ್ವನಿ ಪರಿಚಯ ಮಾಡಿಕೊಟ್ಟಿದ್ದಾರೆ.
Bigg Boss Kannada Season 5 : Big Boss gives a surprise to all its contestants. 2 Special guests enters Big House & one is Kannada Actress Samyuktha hegde & another is still not revealed. Are they guests or contestants? No clarity. You will get to know in 12/12/2017 ( Today's ) episode. Don't miss to watch.

Trending Videos - 28 April, 2024

RELATED VIDEOS

Recent Search - April 28, 2024