ನವಕರ್ನಾಟಕ ನಿರ್ಮಾಣಯಾತ್ರೆಯಲ್ಲಿ ಬೀದರ್ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದ ಸಿದ್ದರಾಮಯ್ಯ | Oneindia Kannada

ನವಕರ್ನಾಟಕ ನಿರ್ಮಾಣಯಾತ್ರೆಯಲ್ಲಿ ಬೀದರ್ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದ ಸಿದ್ದರಾಮಯ್ಯ | Oneindia Kannada

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ಆಡಳಿತಾರೂಢ ಕಾಂಗ್ರೆಸ್ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. 'ನವಕರ್ನಾಟಕ ನಿರ್ಮಾಣಯಾತ್ರೆ' ಎಂಬ ಹೆಸರಿನಲ್ಲಿ ಈಗಾಗಲೇ ಜಿಲ್ಲಾ ಪ್ರವಾಸ ಆರಂಬಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ತುತ್ತತುದಿಯ ಜಿಲ್ಲೆ ಬೀದರ್ ನಲ್ಲಿ ನಿನ್ನೆ(ಡಿ.13) ವಿವಿಧ ಯೋಜನೆಗಳಿಗೆ ಚಾಲನೆ ನೀಡಿದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೀದರ್ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಯೋಜನೆಗಳು, ಕಾಮಗಾರಿಯ ಕುರಿತು ಮಾತನಾಡಿದರು. ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಅವರ ಭಾಷಣದ ಪ್ರಮುಖ ಅಂಶಗಳು ಈ ವಿಡಿಯೋದಲ್ಲಿ ನಿಮಗೆ ನೋಡಲು ಸಿಗುತ್ತದೆ . "ಕೃಷಿ ಭಾಗ್ಯ" ಯೋಜನೆಯಡಿ 2013-14ರಿಂದ ಸಾಲಿನಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಒಟ್ಟು 2311 ಕೃಷಿ ಹೊಂಡಗಳು ಹಾಗೂ 30 ಪಾಲಿಹೌಸ್ ಗಳ ನಿರ್ಮಾಣ ಪೂರ್ಣಗೊಂಡಿದೆ.


User: Oneindia Kannada

Views: 52

Uploaded: 2017-12-14

Duration: 01:08