ಗುಜರಾತ್ ವಿಧಾನಸಭಾ ಚುನಾವಣೆ 2017 : ಗೆಲ್ಲೋದು ಇವರೇ | Oneindia Kannada

By : Oneindia Kannada

Published On: 2017-12-18

798 Views

01:31

ಸಮಸ್ತ ಭಾರತೀಯರ ಚಿತ್ತ ಇಂದು ಗುಜರಾತಿನ ಮೇಲೆ ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ತವರು ಎಂಬ ಕಾರಣಕ್ಕೆ ಗುಜರಾತ್ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮತಎಣಿಕೆ ಆರಂಭವಾಗಲಿದ್ದು, ಟ್ವಿಟ್ಟರ್ ನಲ್ಲಿ ಈಗಾಗಲೇ ಸೋಲು ಯಾರಿಗೆ, ಗೆಲುವು ಯಾರಿಗೆ ಎಂಬ ಕುರಿತು ಚರ್ಚೆ ಆರಂಭವಾಗಿದೆ.ಡಿ.9 ಮತ್ತು 14 ರಂದು ನಡೆದ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು (ಡಿ.18) ಹೊರಬೀಳಲಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿಯವರ ಗುಣಗಾನವೂ ಶುರುವಾಗಿದೆ. ಅಕಸ್ಮಾತ್ ಕಾಂಗ್ರೆಸ್ ಸೋತರೂ, ರಾಹುಲ್ ಗಾಂಧಿ ನಮ್ಮೆಲ್ಲರ ಮನಸ್ಸು ಗೆದ್ದಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು 22 ವರ್ಷಗಳ ಯಶಸ್ವೀ ಆಡಳಿತವನ್ನು ಮತ್ತೆ ಬಿಜೆಪಿ ಮುಂದುವರಿಸಿಕೊಂಡು ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಯಾರು ಏನೇ ಅಂದರೂ ಇಂದು ಮಧ್ಯಾಹ್ನದ ಹೊತ್ತಿಗೆ ಗುಜರಾತಿನ ಐದು ವರ್ಷಗಳ ಭವಿಷ್ಯ ಏನು ಎಂಬುದು ತಿಳಿಯಲಿದೆ. ಈಗಾಗಲೇ ಟ್ವಿಟ್ಟಿಗರು, ಗೆಲ್ಲೋದು ಇವರು, ಸೋಲೋದು ಅವರು ಎನ್ನುತ್ತ ಚರ್ಚೆ ಆರಂಭಿಸಿದ್ದಾರೆ. ಅವುಗಳಲ್ಲಿ ಕೆಲವು ಟ್ವೀಟ್ ಗಳು ಇಲ್ಲಿವೆ.


twitters has saying about Gujarat Aassembly elections 2017 like this , As results for gujarat assembly will be announced today many twitterians have already predicted the results. Here are few statements.

Trending Videos - 11 May, 2024

RELATED VIDEOS

Recent Search - May 11, 2024