ನಿರ್ಮಲಾ ಸೀತಾರಾಮನ್, ಮಹಿಳಾ ರಕ್ಷಣಾ ಸಚಿವೆ ಬೆಂಗಳೂರಿನಲ್ಲಿ | Oneindia Kannada

By : Oneindia Kannada

Published On: 2018-01-03

171 Views

01:35

Indian Defence Minister and Rajya Sabha MP Nirmala Sitharaman was seen walking on the streets of Bengaluru with a few people, and with minimal security on December 30. Some of those who attended the session termed it as a ‘real Aam Aadmi lunch.’ Images show Nirmala, dressed in a black and white Saree, walking the streets of Bengaluru like a regular pedestrian, and having lunch at an Udupi restaurant.

ಚೀನಾದ ಜೊತೆ ದೋಕ್ಲಾಂ ಗಡಿಸಮಸ್ಯೆ ಬಗೆಹರಿದ ಬೆನ್ನಲ್ಲೇ ಆಯಕಟ್ಟಿನ ರಕ್ಷಣಾ ಖಾತೆಯನ್ನು ಅರುಣ್ ಜೇಟ್ಲಿ ಸುಪರ್ದಿಯಿಂದ ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಲಾಗಿದೆ. ಆ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ವಿಶೇಷ ಒತ್ತು ನೀಡುತ್ತಿರುವ ಪ್ರಧಾನಿ ಮೋದಿ ತನ್ನ ಸರಕಾರದಲ್ಲಿ ಮೂರು ಪ್ರಮುಖ ಖಾತೆಯನ್ನು ಸುಷ್ಮಾ ಸ್ವರಾಜ್. ಸ್ಮೃತಿ ಇರಾನಿ ನಂತರ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದ್ದಾರೆ.ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣ ಪ್ರಮಾಣದ ಮಹಿಳಾ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇನ್ನು ನಮ್ಮ ದೇಶದ ಮಹಿಳಾ ರಕ್ಷಣಾ ಸಚಿವೆ ಡಿಸೆಂಬರ್ 30ರಂದು ಬೆಂಗಳೂರಿಗೆ ಬಂದಿದ್ದರು. ಜನ ಸಾಮಾನ್ಯರಂತೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ರಸ್ತೆಯಲ್ಲಿ ತಮ್ಮ ತಂಡದೊಂದಿಗೆ ಯಾವುದೇ ಸುರಕ್ಷತೆ ಇಲ್ಲದೆ ನಡೆದುಕೊಂಡು ಹೋಗುತ್ತಿರುವ ಈ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ರಕ್ಷಣಾ ಸಚಿವೆ ಎಂಬ ಯಾವುದೇ ಅಹಂ ಇಲ್ಲದೆ ಬೆಂಗಳೂರಿನ ಒಂದು ಹೋಟೆಲ್ ನಲ್ಲಿ ಎಲ್ಲರೊಂದಿಗೆ ಕೂತು ಊಟ ಮಾಡಿದ್ದಾರೆ. ಇದರಿಂದ ಒಂದಂತೂ ಸಾಬೀತಾಗುತ್ತೆ. ಈಗಲೂ ಕೂಡ ನಮ್ಮ ದೇಶದಲ್ಲಿ ಕೆಲವು ದೊಡ್ಡ ವ್ಯಕ್ತಿಗಳು ಹೀಗೂ ಇಷ್ಟು ಸಿಂಪಲ್ ಆಗಿ ಇದಾರಲ್ಲ ಅಂತ

Trending Videos - 1 June, 2024

RELATED VIDEOS

Recent Search - June 1, 2024