ಕನ್ನಡ ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ ನಟಿ ಶ್ರುತಿ ಹರಿಹರನ್ | Filmibeat Kannada

ಕನ್ನಡ ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ ನಟಿ ಶ್ರುತಿ ಹರಿಹರನ್ | Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಹರಿಹರನ್ ಸ್ಯಾಂಡಲ್ ವುಡ್ ನ್ನ ಬೆಚ್ಚಿಬೀಳಿಸುವ ಸುದ್ದಿಯೊಂದನ್ನ ಹೊರಹಾಕಿದ್ದಾರೆ. ಹೈದರಬಾದ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಸಿನಿಮಾರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. br br ಸಿನಿಮಾ ನಟಿಯರನ್ನ ನಿರ್ಮಾಪಕರು ಅಥವಾ ನಿರ್ದೇಶಕರು ಮಂಚಕ್ಕೆ ಕರೆಯುವ ಸಂಸ್ಕೃತಿ ಇನ್ನು ಇಂಡಸ್ಟ್ರಿಯಲ್ಲಿದೆ ಎಂದು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರುವ ಮುಂಚೆಯೆ ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ, ನನಗೂ ಕೆಟ್ಟ ಅನುಭವ ಆಗಿತ್ತು. ಆದ್ರೆ, ಅದಕ್ಕೆ ನಾನು ಸಿಲುಕಲಿಲ್ಲ ಎಂದು ನಟಿ ಶ್ರುತಿ ಹರಿಹರನ್ ತಿಳಿಸಿದ್ದಾರೆ. br br ಮೊದಲು ನೃತ್ಯಗಾರ್ತಿಯಾಗಿದ್ದ ಶ್ರುತಿ ನಂತರ ನಟಿಯಾಗಿದ್ದರು. ಈಗ ಕನ್ನಡದ ಯಶಸ್ಸಿನ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ಸಿನಿಮಾ ಮಾಡ್ತಿದ್ದಾರೆ. ಇಷ್ಟೆಲ್ಲಾ ಯಶಸ್ಸಿನ ಹಿಂದೆ ನೋವು ಕೊಡುವ ಸಂಗತಿಯೂ ಇದೆ ಎಂದು ಶ್ರುತಿ ಬಹಿರಂಗಪಡಿಸಿದ್ದಾರೆ br Shruthi hariharan has opened up about casting couch among south Indian actresses . And has shared her personal experiences .


User: Filmibeat Kannada

Views: 3

Uploaded: 2018-01-19

Duration: 01:35