'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಯಾವಾಗ ? | Filmibeat Kannada

By : Filmibeat Kannada

Published On: 2018-01-22

2.1K Views

00:51

ಚಿಟಿಕೆ ಹೊಡೆಯುವಷ್ಟರಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದೆ. ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ #BBK5 ಶೋನಲ್ಲಿ ಹದಿನಾಲ್ಕು ವಾರಗಳು ಕಳೆದು ಹೋಗಿವೆ.

ಬರುವ ಭಾನುವಾರ, ಅಂದ್ರೆ ಜನವರಿ 28 ರಂದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇದಕ್ಕೆ ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಸಾಕ್ಷಿ ಆಗಲಿದೆ.

ಸದ್ಯ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರು ಸ್ಪರ್ಧಿಗಳಿದ್ದಾರೆ. ಚಂದನ್ ಶೆಟ್ಟಿ, ದಿವಾಕರ್, ಸಮೀರಾಚಾರ್ಯ, ನಿವೇದಿತಾ ಗೌಡ, ಜಯರಾಂ ಕಾರ್ತಿಕ್ ಹಾಗೂ ನಿವೇದಿತಾ ಗೌಡ. ಈ ಆರು ಮಂದಿ ಪೈಕಿ ಒಬ್ಬರು ಇಂದು ಔಟ್ ಆಗಲಿದ್ದಾರೆ. ಟಾಪ್ 5 ಹಂತಕ್ಕೆ ಯಾರ್ಯಾರು ತಲುಪುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲ. ಫಿನಾಲೆ ವಾರದಲ್ಲಿ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಏನೇನು ಚಾಲೆಂಜ್ ಕೊಡುತ್ತಾರೆ ಅಂತ ಕಾದು ನೋಡ್ಬೇಕು.

Trending Videos - 29 April, 2024

RELATED VIDEOS

Recent Search - April 29, 2024