Here Are The Reasons For Delayed Periods | Boldsky Kannada

Here Are The Reasons For Delayed Periods | Boldsky Kannada

ಮಹಿಳೆಯರ ಋತುಚಕ್ರವು ಅವರ ಆರೋಗ್ಯವನ್ನು ತೋರಿಸುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹದಿಯಹರೆಯದಲ್ಲಿ ಕಾಣಿಸಿಕೊಳ್ಳುವ ಋತುಚಕ್ರವು ವಯಸ್ಸಾಗುತ್ತಾ ಬರುವಂತೆ ನಿಂತು ಬಿಡುತ್ತದೆ. ಈ ನಡುವೆ ಪ್ರತೀ ತಿಂಗಳು ಋತುಚಕ್ರವಾಗುತ್ತಾ ಇರುತ್ತದೆ. ಋತುಸ್ರಾವ ವಿಳಂಬವಾದರೆ ಅದನ್ನು ಗರ್ಭಧಾರಣೆಯ ಲಕ್ಷಣವೆನ್ನಲಾಗುತ್ತದೆ. ಋತುಸ್ರಾವವಾಗದೆ ಇರುವುದು ಕೂಡ ಗರ್ಭಧಾರಣೆಯಾಗುವ ಸುಳಿವು. ಆದರೆ ಕೆಲವೊಂದು ಸಲ ಋತುಸ್ರಾವ ಆಗದೆ ಇರಲು ಬೇರೆಯೇ ಕಾರಣವಿರಬಹುದು. ಆ ದಿನಗಳಲ್ಲಿ ಕಾಡುವ ಅತೀವ ರಕ್ತಸ್ರಾವ! ಕಾರಣವೇನು? ಅನಿಯಮಿತವಾಗಿ ಋತುಸ್ರಾವವಾಗುವುದು ಎರಡು ಸಂದರ್ಭಗಳಲ್ಲಿ ಮಾತ್ರ. ಒಂದು ಋತುಚಕ್ರದ ಆರಂಭದ ಸಮಯ, ಇನ್ನೊಂದು ಋತುಚಕ್ರವು ನಿಲ್ಲುವ ವೇಳೆ. ಮಹಿಳೆಯ ದೇಹವು ಹಲವಾರು ಬದಾವಣೆಗೆ ಒಗ್ಗಿಕೊಳ್ಳುವ ಕಾರಣದಿಂದಾಗಿ ಋತುಚಕ್ರದಲ್ಲಿ ಬದಲಾವಣೆಗಳು ಆಗುತ್ತಾ ಇರಬಹುದು. ಪ್ರತೀ ತಿಂಗಳು ಮಹಿಳೆಯರು 28 ದಿನಕ್ಕೊಮ್ಮೆ ಋತುಸ್ರಾವವಾಗಬೇಕು. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು? 21ರಿಂದ 35 ದಿನಗಳ ಮಧ್ಯೆ ನಡೆಯುವ ಋತುಸ್ರಾವವು ಆರೋಗ್ಯಕಾರಿ. ಈ ಅಂತರದಲ್ಲಿ ಋತುಚಕ್ರವಿರದೇ ಇದ್ರೆ ಅದನ್ನು ಅನಿಯಮಿತವಾದ ಋತುಚಕ್ರವೆನ್ನಲಾಗುತ್ತದೆ. ಆಗ ದೇಹದಲ್ಲಿ ಏನೋ ಸಮಸ್ಯೆಯಿದೆ ಎಂದು ಭಾವಿಸಬೇಕಾಗುತ್ತದೆ. ಋತುಚಕ್ರ ವಿಳಂಬಗೊಳಿಸುವ ಕೆಲವೊಂದು ಪ್ರಮುಖ ಕಾರಣವನ್ನು ಬೋಲ್ಡ್ ಸ್ಕೈ ನಿಮ್ಮ ಮುಂದಿಡಲಿದೆ....


User: BoldSky Kannada

Views: 33

Uploaded: 2020-03-10

Duration: 02:48

Your Page Title