ಗ್ರಾಹಕರಿಗಾಗಿ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ ರಾಯಲ್ ಎನ್ ಫೀಲ್ಡ್

ಗ್ರಾಹಕರಿಗಾಗಿ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ ರಾಯಲ್ ಎನ್ ಫೀಲ್ಡ್

ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ದೇಶಿಯ ಮಾರುಕಟ್ಟೆಯ ತನ್ನ ಗ್ರಾಹಕರಿಗಾಗಿ ಹಾಗೂ ಈ ಬೈಕ್ ಖರೀದಿಸ ಬಯಸುವವರಿಗಾಗಿ ಹೊಸ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ಈ ಮೊಬೈಲ್ ಆ್ಯಪ್ ಐಒಎಸ್ ಹಾಗೂ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದೆ. br br ಈ ಆ್ಯಪ್ ಹೊಸ ಬೈಕುಗಳ ಆನ್‌ಲೈನ್ ಬುಕಿಂಗ್ ಹಾಗೂ ಸರ್ವೀಸ್ ಅಪಾಯಿಂಟ್ ಮೆಂಟ್ ಗಳನ್ನು ನೀಡುತ್ತದೆ. ಗ್ರಾಹಕರು ತಮ್ಮ ಅನುಕೂಲತೆ ತಕ್ಕಂತೆ ಸರ್ವೀಸ್ ಅಪಾಯಿಂಟ್ ಮೆಂಟ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. br br ಗ್ರಾಹಕರು ಸರ್ವೀಸ್ ಗಾಗಿ ತಮ್ಮ ಬೈಕ್ ಗಳನ್ನು ಕೊಟ್ಟ ನಂತರ ಸರ್ವೀಸ್ ನ ಪ್ರತಿ ಹಂತವನ್ನು ಅಪ್ ಡೇಟ್ ಮಾಡಲಾಗುವುದು. ಇದರಿಂದಾಗಿ ಗ್ರಾಹಕರು ಯೋಜಿತ ರೀತಿಯಲ್ಲಿ ಬೈಕುಗಳನ್ನು ನೀಡಿ ಹಿಂಪಡೆಯಬಹುದು. ಈ ಆ್ಯಪ್ ವರ್ಕ್ ಶಾಪ್ ಹಾಗೂ ಗ್ರಾಹಕರ ಕೆಲಸವನ್ನು ಸುಲಭಗೊಳಿಸುತ್ತದೆ.


User: DriveSpark Kannada

Views: 69

Uploaded: 2020-08-24

Duration: 01:42

Your Page Title