Bajaj Pulsar 250 New Model 2021 Review in Kannada | Bajaj Pulsar N250, F250 Kannada Review

Bajaj Pulsar 250 New Model 2021 Review in Kannada | Bajaj Pulsar N250, F250 Kannada Review

ಬಜಾಜ್ ಆಟೋ ಕಂಪನಿಯು ತನ್ನ ಹೊಚ್ಚ ಹೊಸ ಪಲ್ಸರ್ ಎನ್250 ಮತ್ತು ಎಫ್250 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಕಂಪನಿಯು ಇತ್ತೀಚೆಗೆ ಹೊಸ ಬೈಕ್ ಕಾರ್ಯಕ್ಷಮತೆ ಕುರಿತಂತೆ ಫಸ್ಟ್ ರೈಡ್ ಹಮ್ಮಿಕೊಂಡಿತ್ತು. ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಆಹ್ವಾನ ನೀಡಿದ್ದ ಬಜಾಜ್ ಕಂಪನಿಯು 250ಸಿಸಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ. ಹಾಗಾದ್ರೆ 2021ರ ಬಜಾಜ್ ಪಲ್ಸರ್ 250 ಬೈಕ್ ಮಾದರಿಗಳ ವಿಶೇಷತೆ ಏನು? ಹೊಸ ಬೈಕ್‌ಗಳು ಯಾವೆಲ್ಲಾ ಹೊಸ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ ಎಂಬುವುದನ್ನು ಫಸ್ಟ್ ರೈಡ್ ವಿಮರ್ಶೆಯಲ್ಲಿ ತಿಳಿಯೋಣ. ಹೊಸ ಪಲ್ಸರ್ ಬೈಕ್ ಮಾದರಿಗಳು 250ಸಿಸಿ ಏರ್ ಮತ್ತು ಆಯಿಲ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ ಜೋಡಣೆ ಹೊಂದಿದ್ದು, 5 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 24.1 ಬಿಎಚ್‌ಪಿ ಮತ್ತು 21.5 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೊಸ ಬೈಕಿನಲ್ಲಿ ಇತರೆ ವೈಶಿಷ್ಟ್ಯತೆಗಳೆಂದರೆ ಎಲ್ಇಡಿ ಲೈಟಿಂಗ್ಸ್, ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್-ಚಾನೆಲ್ ಎಬಿಎಸ್ ಸೇರಿದಂತೆ ಹಲವಾರು ವಿಶೇಷತೆಗಳಿದ್ದು, ಹೊಸ ಬೈಕ್ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ಸಂಪೂರ್ಣವಾಗಿ ನೋಡಿ.


User: DriveSpark Kannada

Views: 1

Uploaded: 2021-11-06

Duration: 14:49

Your Page Title