News Cafe | ಕಲಬುರಗಿ : ಸೇತುವೆ ಅರ್ಧಕ್ಕೆ ಸ್ಥಗಿತ; ಗ್ರಾಮಸ್ಥರು ಆಕ್ರೋಶ | May 22, 2022

News Cafe | ಕಲಬುರಗಿ : ಸೇತುವೆ ಅರ್ಧಕ್ಕೆ ಸ್ಥಗಿತ; ಗ್ರಾಮಸ್ಥರು ಆಕ್ರೋಶ | May 22, 2022

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ಕಾಮಗಾರಿ ಹಂತದಲ್ಲಿದ್ದ ಸೇತುವೆ ಅರ್ಧಕ್ಕೆ ಸ್ಥಗಿತಗೊಂಡು ಜನರು ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ. ಜೇವರ್ಗಿ ಪಟ್ಟಣದಿಂದ ಕೇವಲ 20 ಕಿಲೋ ಮೀಟರ್ ದೂರದಲ್ಲಿರೋ ನರಿಬೋಳ ಗ್ರಾಮದ ಜನರು ಪಕ್ಕದ ಊರಾದ ಚಾಮನಾಳ ಗ್ರಾಮಕ್ಕೆ ತೆರಳಬೇಕಾದ್ರೆ ತೂತು ಬಿದ್ದ ದೋಣಿಂiÀಲ್ಲೋ ಅಥವಾ ಆಳವಾದ ನೀರಲ್ಲೆ ಈಜಾಡಿಕೊಂಡು ಹೋಗಬೇಕಿತ್ತು. ಹೀಗಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಜಗದೀಶ ಶೆಟ್ಟರ್ ಸರ್ಕಾರದ ಅವಧಿಯಲ್ಲಿ 66 ಕೋಟಿ ರೂಪಾಯಿ ಹಣ ಇಡಲಾಗಿತ್ತು. ಆದರೆ ಕೋಟಿ ಕೋಟಿ ರೂಪಾಯಿ ಹಣ ಖರ್ಚಾದರು ಸಹ ಇದುವರೆಗೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ತೂತು ಬಿದ್ದ ಬೋಟ್‍ನಲ್ಲೇ ಜನರು, ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ನದಿ ದಾಟುತ್ತಿದ್ದಾರೆ. ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


User: Public TV

Views: 12

Uploaded: 2022-05-22

Duration: 00:31

Your Page Title