News Cafe | Kumta: Bridge Work Resume | HR Ranganath | May 27, 2022

News Cafe | Kumta: Bridge Work Resume | HR Ranganath | May 27, 2022

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬುಗರಿಬೈಲಿನಲ್ಲಿ ಕಳೆದ 4 ವರ್ಷದ ಹಿಂದೆ ಸೇತುವೆ ನಿರ್ಮಾಣವಾಗಿತ್ತು. ಆದರೆ, ಸೇತುವೆಗೆ ಸಂಪರ್ಕ ರಸ್ತೆಯನ್ನು ಜೋಡಿಸದೇ 2 ವರ್ಷದಿಂದ ಸ್ಥಳೀಯರು 20ಕ್ಕೂ ಹೆಚ್ಚು ಅಡಿ ಎತ್ತರದ ಸೇತುವೆಗೆ ಅಡಿಕೆ ಸಂಕ ನಿರ್ಮಿಸಿ ಓಡಾಡ್ತಿದ್ರು. ಈ ಬಗ್ಗೆ ನಿಮ್ಮ ಪಬ್ಲಿಕ್‍ಟಿವಿ ಇದೇ 23ರಂದು ದೃಶ್ಯ ಸಮೇತ ಸುದ್ದಿ ಬಿತ್ತರಿಸಿತ್ತು. ಗಂಗಾವಳಿ-ಮಂಜಗುಣಿ ಸೇತುವೆಯ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದರೂ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ, ಕಾಮಗಾರಿಗಳನ್ನು ಪೂರ್ಣ ಮಾಡಿ ಬಿಟ್ಟರೆ ಜನ ನಮ್ಮನ್ನು ಮರೆತು ಬಿಡುತ್ತಾರೆ. ಮುಂದಿನ ಚುನಾವಣೆಯಲ್ಲಿ ವೋಟ್ ಹಾಕಲ್ಲ. ಅದಕ್ಕೆ 25 ಕಾಮಗಾರಿ ಹಾಗೆಯೇ ಉಳಿಸಿಕೊಂಡಿದ್ದೇವೆ ಅಂದಿದ್ದರು. ಶಾಸಕರ ಹೇಳಿಕೆಗೆ ಪಬ್ಲಿಕ್ ಟಿವಿ ಛೀಮಾರಿ ಹಾಕಿತ್ತು. ಜನಾಕ್ರೋಶ ವ್ಯಕ್ತವಾದ ಬಳಿಕ ಗಂಭೀರವಾದಂತೆ ಕಂಡಿರುವ ದಿನಕರ್ ಶೆಟ್ಟಿ ಸಾಹೇಬ್ರು... ಒಂದೂವರೆ ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಕಾರ್ಯಕರ್ತರಿಗೆ ತಮಾಷೆಯಾಗಿ ಹೇಳಿದ ವಿಡಿಯೋವನ್ನು ನನಗೆ ಆಗದವರು ವೈರಲ್ ಮಾಡ್ತಿದ್ದಾರೆ. ವಿಳಂಬಕ್ಕೆ ಕೊರೋನಾ ಕಾರಣ ಅಂತ ಅಧಿಕಾರಿಗಳು, ಗುತ್ತಿಗೆ ಕಂಪನಿಗೆ ತರಾಟೆ ತೆಗೆದುಕೊಂಡಿದ್ದಾರೆ. 10 ದಿನದಲ್ಲಿ ಕೆಲಸ ಪೂರ್ಣಗೊಳ್ಳುವ ವಿಶ್ವಾಸವಿದೆ ಅಂದಿದ್ದಾರೆ.


User: Public TV

Views: 4

Uploaded: 2022-05-27

Duration: 02:34