News Cafe | Fake ACB Officers Arrested In Hassan | HR Ranganath | May 28, 2022

News Cafe | Fake ACB Officers Arrested In Hassan | HR Ranganath | May 28, 2022

ರಾಜ್ಯದಲ್ಲಿ ನಕಲಿ ಎಸಿಬಿಗಳಿಗೆ ಕೊನೆ ಇಲ್ಲದಂತಾಗಿದೆ. ಪಬ್ಲಿಕ್ ಟಿವಿ ಕೂಡ ಈ ಬಗ್ಗೆ ಸುದೀರ್ಘ ವರದಿ ಮಾಡಿತ್ತು...ಬೆಂಗಳೂರು, ರಾಯಚೂರು, ಧಾರವಾಡ ಸೇರಿ ಹಲವೆಡೆ ನಕಲಿ ಎಸಿಬಿಗಳ ಕಾಟದ ಬಳಿಕ ಇದೀಗ ಹಾಸನದಲ್ಲೂ ನಕಲಿ ಎಸಿಬಿ ಗ್ಯಾಂಗ್ ಸಿಕ್ಕಿಬಿದ್ದಿದೆ. ನಕಲಿ ಎಸಿಬಿ ಅಧಿಕಾರಿಗಳ ಹೆಸರಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕ್ತಿದ್ದ, ಹಣಕ್ಕೆ ಬೇಡಿಕೆ ಇಡ್ತಿದ್ದ ಇಬ್ಬರನ್ನು ಹಾಸನದಲ್ಲಿ ಎಸಿಬಿ ಬಂಧಿಸಿದೆ. ಬೆಳಗಾವಿ ಮೂಲದ ಮುರಿಗೆಪ್ಪಾ ನಿಂಗಪ್ಪ ಕಂಬಾರ(56), ಹಾಸನ ಮೂಲದ ರಜನಿಕಾಂತ್(46) ಬಂಧಿತ ಆರೋಪಿಗಳು. ಅಧಿಕಾರಿಗಳಿಗೆ ಕರೆ ಮಾಡಿ ದಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ಅಕೌಂಟ್ ಹಣ ಹಾಕಿ, ಇಲ್ಲದಿದ್ದರೆ ದಾಳಿ ಮಾಡುವುದಾಗಿ ಬೆದರಿಸಿ ಹಣ ಹಾಕಿಸಿಕೊಳ್ಳುತ್ತಿದ್ದರು. ಬಂಧಿತ ಮುರಿಗೆಪ್ಪ ವಿರುದ್ಧ 40ಕ್ಕೂ ಹೆಚ್ಚು ಪ್ರಕರಣ, ರಜನಿಕಾಂತ್ ವಿರುದ್ಧ 6ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದೆ. ಬೇರೆಯವರ ಹೆಸರಲ್ಲಿ ಸಿಮ್‍ಕಾರ್ಡ್ ಖರೀದಿಸಿ ಇದನ್ನೇ ಕೃತ್ಯಕ್ಕೆ ಬಳಸುತ್ತಿದ್ದರು.


User: Public TV

Views: 0

Uploaded: 2022-05-28

Duration: 00:26