News Cafe | Bengaluru: Parking Curbs Near Stadium For T20 Match Today | June 19, 2022

News Cafe | Bengaluru: Parking Curbs Near Stadium For T20 Match Today | June 19, 2022

ಟಿ-20ಯ ಹೈವೋಲ್ಟೇಜ್ ಮ್ಯಾಚ್‍ಗೆ ಇಂದು ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಲಿದೆ. 5 ಪಂದ್ಯಗಳ ಟಿ-20 ಸರಣಿಯಲ್ಲಿ ತಲಾ ಎರಡು ಪಂದ್ಯಗಳನ್ನ ಗೆದ್ದಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಗೆಲುವಿಗೆ ಕಾದಾಡಲಿವೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಂಜೆ ಪಂದ್ಯ ನಡೆಯಲಿದೆ... ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಆಗಿರೋದ್ರಿಂದು ಬಿಗ್‍ಫೈಟ್‍ನ್ನೇ ನಿರೀಕ್ಷಿಸಬಹುದಾಗಿದೆ. ಉಭಯ ತಂಡಗಳಲ್ಲೂ ಬಿಗ್ ಹಿಟ್ಟರ್‍ಗಳಿದ್ದು ರನ್ ಹೊಳೆ ಹರಿಯೋದ್ರಲ್ಲಿ ಅನುಮಾನವಿಲ್ಲ. ಪಂಥ್ ಸಾರಥ್ಯದ ಯಂಗ್ ಟೀಂ ಇಂಡಿಯಾದಲ್ಲಿ ಸಾಂಘಿಕ ಹೋರಾಟ ಪ್ರದರ್ಶಿಸಿದ್ರೆ ಗೆಲುವು ಕಟ್ಟಿಟ್ಟಬುತ್ತಿ. ಮ್ಯಾಚ್ ಹಿನ್ನೆಲೆ ಇಂದು ಹಲವು ರಸ್ತೆಗಳಲ್ಲಿ ಪಾರ್ಕಿಂಗ್ ಬ್ಯಾನ್ ಮಾಡಲಾಗಿದೆ. ಕ್ವೀನ್ಸ್ ರೋಡ್‍ಯಿಂದ ಬಾಳೆಕುಂದ್ರಿ ರೋಡ್ ತನಕ ಎರಡು ಕಡೆ ಪಾರ್ಕಿಂಗ್ ನಿಷೇಧಿಸಲಾಗಿದೆ. ಎಂ.ಜಿ ರೋಡ್‍ಯಿಂದ ಕ್ವೀನ್ಸ್ ಸರ್ಕಲ್ ತನಕ ಎರಡು ಕಡೆ ಪಾರ್ಕಿಂಗ್ ನಿಷೇಧ ಹೇರಲಾಗಿದೆ. ಸೆಂಟ್ ಜೋಸೆಫ್ ಇಂಡಿಯಾ ಸ್ಕೂಲ್ ಗ್ರೌಂಡ್, ಸೆಂಟ್ ಜೋಸೆಫ್ ಬಾಯ್ಸ್ ಸ್ಕೂಲ್ ಗ್ರೌಂಡ್, ಯುಬಿ ಸಿಟಿ, ಶಿವಾಜಿ ನಗರ ಬಸ್‍ಸ್ಟಾಂಡ್ ಪಂದ್ಯ ನೋಡೋದಕ್ಕೆ ಬರುವ ಅಭಿಮಾನಿಗಳಿಗೆ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.


User: Public TV

Views: 2

Uploaded: 2022-06-19

Duration: 01:42

Your Page Title