04 News Cafe | China Provoking India On LAC In Eastern Ladakh | HR Ranganath | July 25, 2022

04 News Cafe | China Provoking India On LAC In Eastern Ladakh | HR Ranganath | July 25, 2022

ಒಂದು ಕಡೆ ಶಾಂತಿ ಮಾತುಕತೆ ನಡೆಸುತ್ತಿರುವ ಡ್ರ್ಯಾಗನ್ ದೇಶ ಚೀನಾ, ಮತ್ತೊಂದು ಕಡೆ ಕಾಲ್ಕೇರದು ಜಗಳಕ್ಕೆ ಬರುತ್ತಿದೆ. ಭಾರತವನ್ನು ಪ್ರಚೋದಿಸಲು ಚೀನಾ ವಾಯುಸೇನೆ ಪ್ರಯತ್ನ ನಡೆಸುತ್ತಿದ್ದು ಲೈನ್ ಆಫ್ ಆಕ್ಚುಲ್ ಕಂಟ್ರೋಲ್ (ಎಲ್‍ಎಸಿ) ಬಳಿ ಯುದ್ಧ ವಿಮಾನಗಳನ್ನು ಹಾರಿಸಲಾಗುತ್ತಿದೆ. ಚೀನಾದ ವಾಯುಪಡೆಯ ಯುದ್ಧ ವಿಮಾನಗಳು ಪೂರ್ವ ಲಡಾಖ್ ಸೆಕ್ಟರ್‍ನಲ್ಲಿ ಎಲ್‍ಎಸಿಗೆ ತುಂಬಾ ಹತ್ತಿರದಲ್ಲಿ ಹಾರುತ್ತಿವೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ. ಚೀನಾದ ಚಟುವಟಿಕೆಗಳನ್ನು ಭಾರತೀಯ ವಾಯು ಸೇನೆ ನಿರಂತರವಾಗಿ ಮೇಲ್ವಿಚಾರಣೆ ಮಾಡ್ತಿದೆ. ಚೀನಾದ ಯುದ್ಧ ವಿಮಾನಗಳ ಸಂಭವನೀಯ ಬೆದರಿಕೆಯನ್ನು ನಿಭಾಯಿಸಲು ಸುಧಾರಿತ ನೆಲೆಗಳಲ್ಲಿ ಅನೇಕ ಯುದ್ಧ ವಿಮಾನಗಳನ್ನು ಸಿದ್ಧವಾಗಿರಿಸಿದೆ ಎಂದು ಹಿರಿಯ ಸೇನಾ ಅಧಿಕಾರಿಗಳು ಹೇಳಿದ್ದಾರೆ.


User: Public TV

Views: 3

Uploaded: 2022-07-25

Duration: 01:44

Your Page Title