Big Bulletin | Kargil Vijay Diwas: Service Chiefs Lay Wreaths At National War Memorial | HR Ranganath | July 26, 2022

By : Public TV

Published On: 2022-07-26

252 Views

05:48

ಇಂದು ಕಾರ್ಗಿಲ್ ಯುದ್ಧ ಗೆದ್ದ ದಿನ.. ದೇಶಾದ್ಯಂತ ವಿಜಯ್ ದಿವಸ್ ಆಚರಣೆಗಳು ನಡೆದಿವೆ. ಪ್ರಧಾನಿ ಮೋದಿ ಟ್ವೀಟ್ ಮಾಡಿ, ಹುತಾತ್ಮ ಯೋಧರನ್ನು ಸ್ಮರಿಸಿದ್ದಾರೆ. ಈ ದಿನ ದೇಶದ ಹೆಮ್ಮೆ ಎಂದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಮೂರು ಸೇನಾ ಪಡೆಗಳ ಮುಖ್ಯಸ್ಥರು ಗೌರವ ಸಮರ್ಪಣೆ ಮಾಡಿದ್ದಾರೆ. ಲಡಾಖ್‍ನ ದ್ರಾಸ್‍ನಲ್ಲಿರುವ ಕಾರ್ಗಿಲ್ ಹುತಾತ್ಮರ ಸ್ಮಾರಕದಲ್ಲಿಯೂ ಸೇನಾ ಪಡೆಗಳು ಗೌರವ ನಮನ ಸಲ್ಲಿಸಿವೆ. ರಾಜ್ಯಸಭೆ, ಲೋಕಸಭೆ ಸೇರಿ ಎಲ್ಲೆಡೆ ವಿಜಯ್ ದಿವಸ್ ಆಚರಣೆಗಳು ನಡೆದಿವೆ. 23 ವರ್ಷಗಳ ಹಿಂದೆ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಪರ್ವತಗಳನ್ನು ಭಾರತೀಯ ಸೇನೆ ಮರುವಶ ಮಾಡಿಕೊಂಡಿತ್ತು.

#publictv #bigbulletin #hrranganath

Trending Videos - 1 June, 2024

RELATED VIDEOS

Recent Search - June 1, 2024