Kalaburagi Police Arrest 4 People Who Selling Pistols | Public TV

Kalaburagi Police Arrest 4 People Who Selling Pistols | Public TV

ಕಲಬುರಗಿ ಜಿಲ್ಲೆಯ ಭೀಮಾ ತೀರದ ಅಫಜಲಪುರದಲ್ಲಿ ಕಂಟ್ರಿ ಪಿಸ್ತೂಲ್ ಮಾರಾಟ ದಂಧೆ ಮುಂದುವರೆದಿದೆ. ಕಂಟ್ರಿ ಪಿಸ್ತೂಲ್ ಮಾರಾಟ ಮಾಡ್ತಿದ್ದ ಜಾಲವನ್ನ ಅಫಜಲಪುರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಯಡ್ರಾಮಿ ತಾಲ್ಲೂಕಿನ ಭೀಮಣ್ಣ ಪೂಜಾರಿ ಮತ್ತು ಸಿದ್ದಪ್ಪ ಡಿಗ್ಗಾವಿ ಇದರ ಕಿಂಗ್‍ಪಿನ್‍ಗಳು. ಭೀಮಣ್ಣ ಪೂಜಾರಿ ಅಫಜಲಪುರ ಪಟ್ಟಣದ ಬಸ್ ನಿಲ್ದಾಣದ ಬಳಿ ಪಿಸ್ತೂಲ್ ಇಟ್ಟುಕೊಂಡು ನಿಂತಿದ್ದಾಗ ಅರೆಸ್ಟ್ ಮಾಡಲಾಗಿದೆ. ಸಿದ್ದಪ್ಪ ಮತ್ತು ಭೀಮಣ್ಣ ಬಳಿಯಿಂದ 50 ಸಾವಿರಕ್ಕೆ ಗನ್ ಖರೀದಿಸಿರುವ ಜೇವರ್ಗಿ ತಾಲ್ಲೂಕಿನ ಸಲೀಂ ಶಿರಸಗಿ ಹಾಗೂ 65 ಸಾವಿರಕ್ಕೆ ಖರೀದಿಸಿದ್ದ ಯಡ್ರಾಮಿ ತಾಲ್ಲೂಕಿನ ಪರಸಯ್ಯ ಗುತ್ತೇದಾರನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4 ನಾಡ ಪಿಸ್ತೂಲ್, 18 ಜೀವಂತ ಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ.


User: Public TV

Views: 7

Uploaded: 2022-09-03

Duration: 01:32

Your Page Title