ಮಳೆಯಿಂದಾಗಿ ನಷ್ಟ ಅನುಭವಿಸಿದ್ದ ಹೂ ಬೆಳೆಗಾರರಿಗೆ ತುಸು ನೆಮ್ಮದಿ | Kolar | Public TV

ಮಳೆಯಿಂದಾಗಿ ನಷ್ಟ ಅನುಭವಿಸಿದ್ದ ಹೂ ಬೆಳೆಗಾರರಿಗೆ ತುಸು ನೆಮ್ಮದಿ | Kolar | Public TV

ಕಳೆದ ಎರಡು ತಿಂಗಳಿಂದ ಮಳೆರಾಯನ ಅಬ್ಬರಕ್ಕೆ ರೈತರು ಬೆಳೆದ ಕೋಟ್ಯಾಂತರ ರೂಪಾಯಿಯ ವಿವಿಧ ಬೆಳೆಗಳು ನೀರುಪಾಲಾಗಿತ್ತು.. ಆದ್ರೀಗ ನಾಡಿನೆಲ್ಲೆಡೆ ದಸರಾ ಸಂಭ್ರಮ ಹಿನ್ನೆಲೆ ಅಳಿದುಳಿದ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದೆ.. ಕೋಲಾರದಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆಗಳು ಗಗನಕ್ಕೇರಿವೆ.. ಚೆಂಡುಮಲ್ಲಿಗೆ ಹೂವು ಕೆಜಿಗೆ 80, ಸೇವಂತಿಗೆ 250-300 ರೂ. ಬಟನ್ ರೋಸ್ ಕೆಜಿಗೆ 200-250 ರೂ. ಇದ್ದು. ಮಲ್ಲಿಗೆ, ಕನಕಾಂಬರ ಹೂವಿನ ದರವಂತೂ ಸಿಕ್ಕಾಪಟ್ಟೆ ದುಬಾರಿಯಾಗಿದೆ.. ಜಿಲ್ಲೆಯಲ್ಲಿ ಹೆಚ್ಚಾಗಿ ಎಲ್ಲೋ ಬೆನ್‍ಸ್ಟಾಲ್, ಅಷ್ಟ ಗಂಧ, ಮಾರಿಗೋಲ್ಡ್, ಸೇರಿದಂತೆ ಸೇವಂತಿಗೆ ರೋಸ್ ಹೀಗೆ ಹಲವು ರೀತಿಯ ಹೂವುಗಳನ್ನು ಬೆಳೆಯುತ್ತಾರೆ. ಆದರೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವಿಗೆ ಜಾಕ್‍ಪಾಟ್ ಬೆಲೆ ಎನ್ನುವಂತೆ ಡಬಲ್ ಬೆಲೆ ಬಂದಿದೆ.


User: Public TV

Views: 3

Uploaded: 2022-10-04

Duration: 01:28