ಮೈಸೂರು : ನಂಜನಗೂಡಿನ ಜಮೀನುಗಳತ್ತ ಧಾವಿಸಿ ಬೆಳೆ ನಾಶಪಡಿಸಿದ ಕಾಡಾನೆಗಳು

ಮೈಸೂರು : ನಂಜನಗೂಡಿನ ಜಮೀನುಗಳತ್ತ ಧಾವಿಸಿ ಬೆಳೆ ನಾಶಪಡಿಸಿದ ಕಾಡಾನೆಗಳು

pಮೈಸೂರು : ನಂಜನಗೂಡಿನ ಕಾಡಂಚಿನ ಗ್ರಾಮಗಳ ಜಮೀನಿನ ಸುತ್ತಮುತ್ತ ಕಾಣಿಸಿಕೊಂಡ ನಾಲ್ಕು ಕಾಡಾನೆಗಳು ಜಮೀನಿನಲ್ಲಿ ರಾಗಿ, ಬಾಳೆ, ಇತರೆ ಬೆಳೆಗಳನ್ನ ತಿಂದು ನಾಶ ಮಾಡಿವೆ.ppಹೆಡಿಯಾಲ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಆಂಜನಪುರ, ಈರೇಗೌಡನ ಹುಂಡಿ, ಮಡುವಿನಹಳ್ಳಿ ಗ್ರಾಮಸ್ಥರು ಗುರುವಾರ ಬೆಳಗ್ಗೆ 9ರ ಸಮಯದಲ್ಲಿ ಜಮೀನಿನಲ್ಲಿ ಹಾಗೂ ರಸ್ತೆಯಲ್ಲಿ ಓಡಾಡುತ್ತಿರುವ ಕಾಡಾನೆಗಳನ್ನು ನೋಡಿ ಹೆದರಿದ್ದಾರೆ. ppಸಾರ್ವಜನಿಕರು, ವಿದ್ಯಾರ್ಥಿಗಳು ಶಾಲೆಗೆ ಹೋಗುವ ಸಮಯದಲ್ಲಿ ಹಾಗೂ ರೈತರು ತಮ್ಮ ತಮ್ಮ ಜಮೀನಲ್ಲಿ ಕೆಲಸ ಮಾಡುವ ವೇಳೆಯಲ್ಲಿಯೇ ಆನೆಗಳು ಅಡ್ಡಾ ದಿಡ್ಡಿಯಾಗಿ ಓಡಾಡಿ ಭಯ ಹುಟ್ಟಿಸುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.ppಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಸಾರ್ವಜನಿಕರು ಕಾಡಾನೆಗಳು ಸಂಚರಿಸುವ ವೇಳೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.   ppಹೆಡಿಯಾಲ ಗ್ರಾಮದಲ್ಲಿ ಆನೆಗಳ ಭೀತಿ : ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿರುವ ಹೆಡಿಯಾಲ ಗ್ರಾಮವು ಕಾಡಂಚಿನ ಪ್ರದೇಶದ ಸಮೀಪ ಇರುವುದರಿಂದ ಆಗಾಗ ಕಾಡಾನೆಗಳು ಹಾಗೂ ಕಾಡು ಪ್ರಾಣಿಗಳ ಉಪಟಳ ಜಾಸ್ತಿಯಾಗುತ್ತಿದೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆ ಏನೇ ಎಚ್ಚರಿಕೆ ವಹಿಸಿದ್ದರೂ ಕಾಡಾನೆಗಳು ಬುದ್ಧಿವಂತಿಕೆಯಿಂದ ಆಚೆ ಬಂದು ಉಪಟಳ ನೀಡುತ್ತಿವೆ.


User: ETVBHARAT

Views: 1

Uploaded: 2025-01-17

Duration: 01:14

Your Page Title