ತೆರಿಗೆ ಹಣಕ್ಕೆ ಕ್ರೆಡಿಟ್ ಯಾಕೆ?: ಯುದ್ಧ ಕ್ರೆಡಿಟ್ ಸೈನಿಕರಿಗೆ, ಮೋದಿ ನಾಯಕತ್ವಕ್ಕೆ ಜನ ಮನ್ನಣೆ: Prathap Simha

ತೆರಿಗೆ ಹಣಕ್ಕೆ ಕ್ರೆಡಿಟ್ ಯಾಕೆ?: ಯುದ್ಧ ಕ್ರೆಡಿಟ್ ಸೈನಿಕರಿಗೆ, ಮೋದಿ ನಾಯಕತ್ವಕ್ಕೆ ಜನ ಮನ್ನಣೆ: Prathap Simha

ಮುಖ್ಯಮಂತ್ರಿಗಳ "ಯುದ್ಧದ ಕ್ರೆಡಿಟ್ ಸೈನಿಕರಿಗೆ" ಎಂಬ ಹೇಳಿಕೆಗೆ ಸಂಸದ ಪ್ರತಾಪ ಸಿಂಹ ಮೈಸೂರಿನಲ್ಲಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ. "ಜನರ ತೆರಿಗೆ ಹಣದಲ್ಲಿ ಯೋಜನೆಗಳನ್ನು ನೀಡಿ 'ನಾನೇ ಕೊಟ್ಟೆ' ಎಂದು ಬೀಗುವುದೇಕೆ? ಅದರ ಶ್ರೇಯ ತೆರಿಗೆದಾರರಿಗೆ ಸಲ್ಲಬೇಕು," ಎಂದು ಪ್ರಶ್ನಿಸಿದ ಅವರು, ಯುದ್ಧದ ಗೆಲುವಿನ ಕ್ರೆಡಿಟ್ ಸೈನಿಕರಿಗೆ ಸಲ್ಲುವಂತೆ, ದೃಢ ನಾಯಕತ್ವಕ್ಕೆ ಜನ ಮನ್ನಣೆ ನೀಡುತ್ತಾರೆ, ಮೋದಿಯವರಿಗೆ ಜನ ಮನ್ನಣೆ ನೀಡಿದರೆ ನಿಮಗೇಕೆ ಅಸಮಾಧಾನ ಎಂದು ಕುಟುಕಿದ್ದಾರೆ. ಮೋದಿ ಸೈನಿಕರಿಗೆ ಸ್ವಾತಂತ್ರ್ಯ ಮತ್ತು ಶಕ್ತಿ ನೀಡಿದ್ದು, ಇದನ್ನು ಹಿಂದಿನವರು ಮಾಡಲು ವಿಫಲರಾಗಿದ್ದರು ಎಂದು ಸಿಂಹ ವಾಗ್ದಾಳಿ ನಡೆಸಿದ್ದಾರೆ.


User: Asianet News Kannada

Views: 3.2K

Uploaded: 2025-05-16

Duration: 04:01

Your Page Title