ರಾಜೀನಾಮೆ ಕೊಟ್ಟು ಮಾತಾಡಿ! ಛಲವಾದಿಗೆ ಸಚಿವ Priyank Kharge ಟಾಂಗ್ Priyank Kharge Vs Chalavadi Narayanaswamy

ರಾಜೀನಾಮೆ ಕೊಟ್ಟು ಮಾತಾಡಿ! ಛಲವಾದಿಗೆ ಸಚಿವ Priyank Kharge ಟಾಂಗ್ Priyank Kharge Vs Chalavadi Narayanaswamy

ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿಯವರ 'ಕಾಂಗ್ರೆಸ್ ಪಾಕಿಸ್ತಾನ ಪರ' ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, 'ಅವರಿಗೆ ಇತಿಹಾಸದ ಅರಿವಿದೆಯೇ? ನೈತಿಕತೆಯಿದ್ದರೆ ರಾಜೀನಾಮೆ ನೀಡಿ ಮಾತನಾಡಲಿ, ಆರ್ ಎಸ್ ಎಸ್ ಚಡ್ಡಿ ಹೊತ್ತ ತಕ್ಷಣ ದೊಡ್ಡ ನಾಯಕರಾಗುವುದಿಲ್ಲ' ಎಂದು ಸವಾಲೆಸೆದಿದ್ದಾರೆ. 'ಅಪರೇಷನ್ ಸಿಂಧೂರ'ದಂತಹ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಸದನದಲ್ಲಿ ಉತ್ತರಿಸುವುದಾಗಿ ಸ್ಪಷ್ಟಪಡಿಸಿರುವ ಅವರು, ವಿರೋಧ ಪಕ್ಷದವರು ಮೊದಲು ತಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದಿದ್ದಾರೆ. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಚರ್ಚೆ ಇಲ್ಲ, 'ಸಾಧನಾ ಸಮಾವೇಶ'ದ ಮೂಲಕ ಸರ್ಕಾರದ ಎರಡು ವರ್ಷಗಳ ಸಾಧನೆ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದೇ ತಮ್ಮ ಆದ್ಯತೆ ಎಂದು ಖರ್ಗೆಯವರು ತಿಳಿಸಿದ್ದಾರೆ.


User: Asianet News Kannada

Views: 7.6K

Uploaded: 2025-05-18

Duration: 07:28