SBI ಬ್ಯಾಂಕ್ ಗೆ ಕನ್ನಡಪರ ಸಂಘಟನೆಗಳಿಂದ ಮುತ್ತಿಗೆ ಭೀತಿ | SBI Kannada Apology | Suvarna News

SBI ಬ್ಯಾಂಕ್ ಗೆ ಕನ್ನಡಪರ ಸಂಘಟನೆಗಳಿಂದ ಮುತ್ತಿಗೆ ಭೀತಿ | SBI Kannada Apology | Suvarna News

ಚಂದಾಪುರ ಎಸ್‌ಬಿಐ ಬ್ಯಾಂಕ್‌ನ ಮಹಿಳಾ ಅಧಿಕಾರಿಯೊಬ್ಬರು ಕನ್ನಡದಲ್ಲಿ ವ್ಯವಹರಿಸದ ಕಾರಣ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು ಬ್ಯಾಂಕ್‌ಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದವು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಎಸ್‌ಬಿಐ ಶಾಖೆಯ ಸಿಬ್ಬಂದಿ, ತಕ್ಷಣವೇ ಮಧ್ಯಪ್ರವೇಶಿಸಿ, ಆ ಮಹಿಳಾ ಅಧಿಕಾರಿಯಿಂದ ಕನ್ನಡದಲ್ಲೇ ಕ್ಷಮೆ ಕೋರುವಂತೆ ಮಾಡಿದ್ದಾರೆ. "ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ, ಇನ್ನು ಮುಂದೆ ಕನ್ನಡದಲ್ಲೇ ವ್ಯವಹಾರ ಮಾಡಲು ಪ್ರಾರಂಭಿಸುತ್ತೇನೆ" ಎಂದು ಆ ಅಧಿಕಾರಿ ವಿಡಿಯೋ ಮೂಲಕ ಸ್ಪಷ್ಟ ಕನ್ನಡದಲ್ಲಿ ಕ್ಷಮೆ ಯಾಚಿಸಿರುವ ಘಟನೆ ನಡೆದಿದೆ.


User: Asianet News Kannada

Views: 1.3K

Uploaded: 2025-05-21

Duration: 06:15