ಆಹಾರ ಅರಸಿ ಬಂದಾಗ ಬೇರ್ಪಟ್ಟ ಮರಿ ಆನೆ: ಮರಳಿ ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಆಹಾರ ಅರಸಿ ಬಂದಾಗ ಬೇರ್ಪಟ್ಟ ಮರಿ ಆನೆ: ಮರಳಿ ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

pಮೈಸೂರು: ತಾಯಿಯಿಂದ ಬೇರ್ಪಟ್ಟ ಮರಿ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ, ಮತ್ತೆ ತಾಯಿ ಆನೆಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ppನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ವರ್ತಿ ಹಾಡಿಯಲ್ಲಿ ಆಹಾರ ಅರಸಿ ಬಂದ ಆನೆಗಳ ಹಿಂಡಿನಿಂದ ಮರಿಯಾನೆ ಬೇರ್ಪಟ್ಟಿತ್ತು. ತಾಯಿ ಆನೆಯಿಂದ ಬೇರ್ಪಟ್ಟ ಬಳಿಕ ಒಂಟಿಯಾದ ಮರಿ ಹಾಡಿಯಲ್ಲಿ ಓಡಾಡುತ್ತಿತ್ತು.ppಇದನ್ನು ನೋಡಿದ ಹಾಡಿ ನಿವಾಸಿಗಳು, ಮರಿ ಆನೆ ಇರುವುದನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಮರಿ ಆನೆಯನ್ನು ಕಾಡಂಚಿನ ಪ್ರದೇಶದಲ್ಲಿ ಕರೆದೊಯ್ದು, ಜೋಪಾನವಾಗಿ ತಾಯಿ ಆನೆಯನ್ನು ಸೇರುವಂತೆ ಮಾಡಿದ್ದಾರೆ.


User: ETVBHARAT

Views: 395

Uploaded: 2025-06-14

Duration: 01:07

Your Page Title