ಭಟ್ಕಳ: ಹೆದ್ದಾರಿಯಲ್ಲಿ ಉರುಳಿದ ಬೃಹತ್ ಮರ; ಟ್ಯಾಂಕರ್, ಬೈಕ್ ಸವಾರರು ಜಸ್ಟ್​​​ ಮಿಸ್​...WATCH VIDEO

ಭಟ್ಕಳ: ಹೆದ್ದಾರಿಯಲ್ಲಿ ಉರುಳಿದ ಬೃಹತ್ ಮರ; ಟ್ಯಾಂಕರ್, ಬೈಕ್ ಸವಾರರು ಜಸ್ಟ್​​​ ಮಿಸ್​...WATCH VIDEO

pಕಾರವಾರ(ಉತ್ತರ ಕನ್ನಡ): ಭಟ್ಕಳ ತಾಲೂಕಿನ ಮುರುಡೇಶ್ವರದ ಕಾಯ್ಕಿಣಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗಾಳಿ ಮಳೆಗೆ ಬೃಹತ್​ ಮರವೊಂದು ಬುಡ ಸಮೇತ ಕಿತ್ತು ಬಿದ್ದಿದ್ದು, ಇದೇ ವೇಳೆ ಚಲಿಸುತ್ತಿದ್ದ ವಾಹನಗಳು ಅದೃಷ್ಟವಶಾತ್​​ ಕೂದಲೆಳೆ ಅಂತರದಲ್ಲಿ ಪಾರಾಗಿವೆ.ppಗಾಳಿ ಮಳೆಗೆ ವಿದ್ಯುತ್​​ ತಂತಿ ಮೇಲೆ ಬಿದ್ದಿದ್ದು, ಸ್ಪಾರ್ಕ್​ ಆಗಿದೆ. ಇದೇ ವೇಳೆ ಅಲ್ಲೇ ಟ್ಯಾಂಕರ್ ಲಾರಿ ಪಾಸಾಗಿದ್ದು ಅದರ ಹಿಂದೆ ಇದ್ದ 2 ಬೈಕ್​​​​ ಸವಾರರ ಕಣ್ಣೇದುರೇ ಮರ ಬಿದ್ದಿದೆ. ತಕ್ಷಣವೇ ಬೈಕ್​ನಿಂದ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಯಾನಕ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ.ppಘಟನೆ ನಡೆದ ತಕ್ಷಣ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಗಾಳಿ ಮಳೆಯಿಂದಾಗಿ ಮರ ಬಿದ್ದಿದೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಮರ ಬೀಳುತ್ತಿದ್ದಂತೆ ಬೈಕ್ ಸವಾರ ಸಮಯ ಪ್ರಜ್ಞೆಯಿಂದ ನಡೆದುಕೊಂಡು ಅಪಾಯದಿಂದ ಪಾರಾಗಿರುವುದು ಗೋಚರಿಸುತ್ತದೆ. ಈ ಹಿಂದೆ ಬೆಂಗಳೂರಿನ ಬನಶಂಕರಿಯ ಬ್ರಹ್ಮಚೈತನ್ಯ ಮಂದಿರದ ಬಳಿ  ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಸವಾರನ ತಲೆ ಮೇಲೆ ಮರದ ಕೊಂಬೆ ಬಿದ್ದು ಸಾವನ್ನಪ್ಪಿದ್ದ. ನಿನ್ನೆ ಕಾರವಾದಲ್ಲಿ ನಡೆದ ಘಟನೆಯಲ್ಲಿ ಹೆಚ್ಚು ಕಮ್ಮಿಯಾಗಿದ್ದರು 3ಕ್ಕೂ ಅಧಿಕ ಪ್ರಾಣಕ್ಕೆ ಕುತ್ತು ಬರುತ್ತಿತ್ತು.


User: ETVBHARAT

Views: 58

Uploaded: 2025-07-17

Duration: 01:15

Your Page Title