ದಾವಣಗೆರೆ: ನಾಗರಪಂಚಮಿ ದಿನದಂದೇ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಾಗರಹಾವು ಪ್ರತ್ಯಕ್ಷ

ದಾವಣಗೆರೆ: ನಾಗರಪಂಚಮಿ ದಿನದಂದೇ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಾಗರಹಾವು ಪ್ರತ್ಯಕ್ಷ

pದಾವಣಗೆರೆ : ನಾಗರಪಂಚಮಿ ಹಬ್ಬದ ದಿನದಂದೇ ನಗರದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ppಹಾವನ್ನು ಕಂಡ ಪೊಲೀಸರು ಕೆಲ ಕಾಲ ಗಲಿಬಿಲಿಗೊಂಡಿದ್ದಾರೆ. ಠಾಣೆಯ ಒಳಗೆ ಪ್ರವೇಶ ಮಾಡಿದ ನಾಗರಹಾವು ಹೆಡೆ ಎತ್ತಿ ಎಲ್ಲರಿಗೂ ದರ್ಶನ ನೀಡಿದೆ. ಹಾವು ಠಾಣೆಯೊಳಗೆ ಬಂದಿದ್ದರಿಂದ ಕೆಲ ಪೊಲೀಸ್ ಸಿಬ್ಬಂದಿ ಆತಂಕದಲ್ಲೇ ಕಾರ್ಯನಿರ್ವಹಿಸಿದ್ದಾರೆ. ppಠಾಣೆವೊಳಗೆ ಬುಸು ಗುಡುತ್ತ ಸರ ಸರ ನಡೆದ ನಾಗರಹಾವು ಕ್ಷಣಾರ್ಧದಲ್ಲೇ ಮಾಯವಾಗಿದೆ. ನಾಗಪ್ಪ ಠಾಣೆಯೊಳಗೆ ಬರುತ್ತಿದ್ದಂತೆ ಠಾಣಾ ಸಿಬ್ಬಂದಿ ಒಮ್ಮೆಲೇ ಆತಂಕಗೊಂಡು ಹಾವಿಗಾಗಿ ಹುಡುಕಾಡತೊಡಗಿದ್ದಾರೆ. ppಸ್ಥಳಕ್ಕೆ ಜನರು ಬರುತ್ತಿದ್ದಂತೆ ನಾಗರಹಾವು ಪೊದೆಯಲ್ಲಿ ಕಣ್ಮರೆಯಾಗಿದೆ. ಸದ್ಯ ಹಾವಿನ ಚಲನವಲನವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​​ನಲ್ಲಿ ಸೆರೆಹಿಡಿದಿದ್ದಾರೆ. ppಕಾಳಿಂಗಸರ್ಪ ರಕ್ಷಣೆ (ಪ್ರತ್ಯೇಕ ಸುದ್ದಿ) : ಬಲ್ಲಮಾವಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲಜಿ ಗ್ರಾಮದ ನಿವಾಸಿ ಅಪ್ಪುಮಣಿಯಂಡ ರಘು ಸುಬ್ಬಯ್ಯ ಎಂಬವರ ಗದ್ದೆಯಲ್ಲಿದ್ದ 10 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಮೂರ್ನಾಡಿನ ಉರಗತಜ್ಞ ಸ್ನೇಕ್ ಪ್ರಜ್ವಲ್ ಜುಲೈ 24 ರಂದು ರಕ್ಷಣೆ ಮಾಡಿದ್ದರು.


User: ETVBHARAT

Views: 23

Uploaded: 2025-07-28

Duration: 01:09

Your Page Title