ಪೊಲೀಸರ ಸಮಯ ಪ್ರಜ್ಞೆ: ಬೇಲಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಜಿಂಕೆ ರಕ್ಷಣೆ!

ಪೊಲೀಸರ ಸಮಯ ಪ್ರಜ್ಞೆ: ಬೇಲಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಜಿಂಕೆ ರಕ್ಷಣೆ!

pಕಾರವಾರ: ಹೊಲದ ಬೇಲಿಯಲ್ಲಿ ಸಿಲುಕಿಕೊಂಡು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜಿಂಕೆಯೊಂದನ್ನು ಪೊಲೀಸರು ಹಾಗೂ ಸಾರ್ವಜನಿಕರು ಸೇರಿ ರಕ್ಷಿಸಿದ ಘಟನೆ ಹಳಿಯಾಳ ತಾಲೂಕಿನ ಕಲಘಟಗಿ ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ನಡೆದಿದೆ.ppಪೊಲೀಸರು ಆರೋಪಿಯನ್ನು ಹಳಿಯಾಳ ಕಾರಾಗೃಹಕ್ಕೆ ಬಿಟ್ಟು ಮುಂಡಗೋಡ ಪೊಲೀಸ್ ಠಾಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗೋವಿನಜೋಳದ ಸುತ್ತಲೂ ಹಾಕಿರುವ ಬೇಲಿಯಲ್ಲಿ ಜಿಂಕೆಯೊಂದು ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಕಂಡ ಮುಂಡಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ದಿನೇಶ್ ನಾಯಕ್ ಹಾಗೂ ಸಹದೇವ ಅವರು ಜಿಂಕೆಯ ರಕ್ಷಣೆಗೆ ಧಾವಿಸಿದ್ದಾರೆ. ಇದೇ ಸಮಯದಲ್ಲಿ ಸಾರ್ವಜನಿಕರು ಕೂಡ ಅಲ್ಲಿಗೆ ಬಂದಿದ್ದು, ಅವರ ಜೊತೆಗೆ ಸೇರಿ ಜಿಂಕೆಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಕಾಡು ಪ್ರಾಣಿಗಳ ರಕ್ಷಣೆ ಎಲ್ಲರ ಕರ್ತವ್ಯ ಎಂಬುದನ್ನು ಇವರು ಸಾಬೀತು ಮಾಡಿದ್ದಾರೆ.ppಬೇಲಿಯಲ್ಲಿ ಸಿಲುಕಿಕೊಂಡಿದ್ದ ಜಿಂಕೆಯನ್ನು ಪೊಲೀಸರು ಹಾಗೂ ಸಾರ್ವಜನಿಕರು ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


User: ETVBHARAT

Views: 57

Uploaded: 2025-08-02

Duration: 01:37

Your Page Title