ಶಿವಮೊಗ್ಗದಲ್ಲೂ ದಸರಾಗೆ ಅದ್ಧೂರಿ ಚಾಲನೆ: 650 ಕೆ.ಜಿ ತೂಕದ ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹ ಮೆರವಣಿಗೆ

ಶಿವಮೊಗ್ಗದಲ್ಲೂ ದಸರಾಗೆ ಅದ್ಧೂರಿ ಚಾಲನೆ: 650 ಕೆ.ಜಿ ತೂಕದ ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹ ಮೆರವಣಿಗೆ

pಶಿವಮೊಗ್ಗ: ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಆಚರಿಸುವ ನಾಡಹಬ್ಬ ದಸರಾಗೆ ಅದ್ಧೂರಿ ಚಾಲನೆ ನೀಡಲಾಯಿತು. ಮಹಾನಗರ ಪಾಲಿಕೆಯಿಂದ ಸೋಮವಾರದಿಂದ (ಸೆ.22) ನಗರದ ವಿವಿಧ ಭಾಗಗಳಲ್ಲಿ ದಸರಾ ಕಾರ್ಯಕ್ರಮಗಳು ನಡೆಯಲಿವೆ. ppಸುಮಾರು 650 ಕೆ.ಜಿ ತೂಕದ ಬೆಳ್ಳಿಯಿಂದ ನಿರ್ಮಾಣವಾದ ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಪಾಲಿಕೆಯಿಂದ ಭವ್ಯವಾದ ಮೆರವಣಿಗೆಯ ಮೂಲಕ ಕೋಟೆ ಶ್ರೀ ಚಂಡಿಕಾ‌ಪರಮೇಶ್ವರಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು. ಶಿವಮೊಗ್ಗ ದಸರಾಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಚಾಲನೆ ನೀಡಿದರು.ppಈ ವೇಳೆ ಮಾತನಾಡಿದ ಅವರು, "ಆಪರೇಷನ್ ಸಿಂಧೂರ ಆದಾಗ ಭಾರತೀಯ ಸೇನೆ, ವಾಯುಪಡೆ ಮಾತ್ರ ಹೋಗಲ್ಲ. ಇಡೀ ದೇಶ ಹೋಗುತ್ತದೆ. ದೇಶದ ಜೊತೆ ನೀವು ಇದ್ದಾಗ ಮಾತ್ರ ಗೆಲುವು ಖಚಿತ. 22 ತಿಂಗಳ ಹಿಂದೆ ನಿವೃತ್ತಿಯಾಗಿದ್ದೇನೆ. 50 ವರ್ಷಗಳ ಕಾಲ ಸಮವಸ್ತ್ರ ಧರಿಸಿದ್ದೇನೆ. ಪತ್ನಿಯ ಬೆಂಬಲ ಇದೆ. ಗಂಡ ಮುಂದೆ ಬರಲು ಪತ್ನಿಯ ಬೆಂಬಲ ಅತ್ಯಗತ್ಯ" ಎಂದರು.pp"ಲೇಹ್ ಲಡಾಖ್​ನಲ್ಲಿ ಮೊದಲ ಸೇವೆ ಸಲ್ಲಿಸಿದ್ದೆ. ಬಳಿಕ ಸಿಯಾಚಿನ್​ನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಮೈನಸ್ ಡಿಗ್ರಿ ಉಷ್ಣತೆ ಇರುತ್ತದೆ. ನಾಲ್ಕು ತಿಂಗಳ ಕಾಲ ಅಲ್ಲಿ ಇದ್ದೆವು. ಮೈನಸ್​ 50 ಡಿಗ್ರಿ ಮತ್ತು ಪ್ಲಸ್ 50 ಡಿಗ್ರಿ ಉಷ್ಣತೆಯಲ್ಲಿ ಕೆಲಸ ಮಾಡಿದ್ದೇನೆ. ತಾಯಂದಿರು, ಪೋಷಕರು, ತಮ್ಮ ಮಕ್ಕಳು ಸೇನೆ ಸೇರುವ ಬಯಕೆ ಹೊಂದಿದ್ದರೆ ತಡೆಯಬೇಡಿ. ಅದೊಂದು ಅಪೂರ್ವ ಅವಕಾಶ. ಧರ್ಮ, ಸತ್ಯದ ಜಯವೇ ದಸರಾ ಆಚರಣೆ"ಎಂದು ಸಂದೇಶ ಸಾರಿದರು. ಅಲ್ಲದೆ, "ಅನ್ಯಾಯ ಎಷ್ಟೇ ಬಲಿಷ್ಠ ಆಗಿದ್ದರೂ ಸಹ ಅದು ಸೊಲಲೇಬೇಕು. ನಮ್ಮ ಸಂಸ್ಕೃತಿಯ ಜೀವಂತಿಕೆಗೆ ಸಾಕ್ಷಿ ಹಬ್ಬಗಳ ಆಚರಣೆ. ಸಂಸ್ಕೃತಿ, ಶಿಸ್ತು, ತ್ಯಾಗವನ್ನು ಹಬ್ಬ ಕಲಿಸುತ್ತದೆ. ಮೌಲ್ಯ ಕಾಪಾಡಬೇಕು" ಎಂದು ಸಲಹೆ ನೀಡಿದರು.ppಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಪಾಲಿಕೆಯ ಮಾಜಿ ಸದಸ್ಯರು ಹಾಜರಿದ್ದರು. ppಇನ್ನು ಮಹಾನಗರ ಪಾಲಿಕೆಯಿಂದ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿ ತೆಗೆದುಕೊಂಡು ಹೋಗುವಾಗ ಅನೇಕ ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾದವು. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಅಧಿಕಾರಿಗಳ ಜೊತೆ ಸೇರಿ ಭರ್ಜರಿ ಸ್ಟೆಪ್ಸ್​ ಹಾಕಿದರು.


User: ETVBHARAT

Views: 15

Uploaded: 2025-09-22

Duration: 03:53

Your Page Title