ಟ್ರಂಪ್‌ ಹೊಗಳಿದ ಪಾಕ್‌ ಪ್ರಧಾನಿ

ಟ್ರಂಪ್‌ ಹೊಗಳಿದ ಪಾಕ್‌ ಪ್ರಧಾನಿ

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸೀಮ್ ಮುನೀರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿ ಮಾಡಿ 90 ನಿಮಿಷಗಳ ಮಾತುಕತೆ ನಡೆಸಿದರು. ವಿಶ್ವಸಂಸ್ಥೆಯ 80ನೇ ಅಧಿವೇಶನಕ್ಕೂ ಮುನ್ನ ನಡೆದ ಈ ಸಭೆಯಲ್ಲಿ ಭದ್ರತೆ, ಆರ್ಥಿಕತೆ, ಭಯೋತ್ಪಾದನೆ ನಿಗ್ರಹ, ಖನಿಜ ಸಂಪತ್ತು ಶೋಧನೆ, ತೈಲ ಪರಿಶೋಧನೆ, ಬಾಗ್ರಾಮ್ ವಾಯುನೆಲೆ ಮತ್ತು ಚೀನಾ ಪ್ರಭಾವದ ಕುರಿತು ಚರ್ಚಿಸಲಾಯಿತು. ಜಂಟಿ ಭಯೋತ್ಪಾದನಾ ನಿಗ್ರಹ ಘಟಕ ಸ್ಥಾಪನೆಗೂ ಒಪ್ಪಂದವಾಯಿತು. ಸಭೆಯ ಬಳಿಕ ಭಾರತ-ಪಾಕಿಸ್ತಾನ ಕದನ ವಿರಾಮ ಹಾಗೂ ಮಧ್ಯಪ್ರಾಚ್ಯ ಶಾಂತಿಗೆ ಟ್ರಂಪ್ ಕಾರಣ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಡಿ ಹೊಗಳಿದರು.


User: ಪ್ರಸಾರ ಬಿಂದು

Views: 0

Uploaded: 2025-09-26

Duration: 00:05