ಕೋಲಾರ: ಕಾಲುವೆಗೆ ಉರುಳಿದ ಖಾಸಗಿ ಬಸ್; ಆರತಕ್ಷತೆಗೆ ಬಂದಿದ್ದ 30 ಮಂದಿಗೆ ಗಾಯ

ಕೋಲಾರ: ಕಾಲುವೆಗೆ ಉರುಳಿದ ಖಾಸಗಿ ಬಸ್; ಆರತಕ್ಷತೆಗೆ ಬಂದಿದ್ದ 30 ಮಂದಿಗೆ ಗಾಯ

pಕೋಲಾರ: ಮದುವೆ ಆರತಕ್ಷತೆ ಮುಗಿಸಿಕೊಂಡು ವಾಪಸಾಗುತ್ತಿದ್ದ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದು ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಕೋಲಾರ ತಾಲೂಕು ಸುಗಟೂರು ಗ್ರಾಮದ ಬಳಿ ನಡೆದಿದೆ. ppಮದುವೆ ಆರತಕ್ಷತೆ ಕೋಲಾರದ ಹೊರವಲಯದ ರತ್ನ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ಕಾರ್ಯಕ್ರಮ ಮುಗಿಸಿ ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಗ್ರಾಮಕ್ಕೆ ಮರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಬಸ್ ಕಾಲುವೆಗೆ ಉರುಳಿ ಬಿದ್ದಿದೆ. ppಬಸ್​ನಲ್ಲಿ ಸುಮಾರು 55 ಜನ ಪ್ರಯಾಣಿಕರಿದ್ದರು. ಈ ಪೈಕಿ 10 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 20 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ppಪ್ರಯಾಣಿಕರೆಲ್ಲರೂ ನೀರಿಗೆ ಬಿದ್ದಿದ್ದಾರೆ. ಗಾಬರಿಯಾಗಿ ಕಿರುಚಾಡಿದ್ದರಿಂದ ಕೂಡಲೇ ಧಾವಿಸಿ ಬಂದ ಸ್ಥಳೀಯರು ಬಸ್​ನ ಕೆಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಗಾಯಳುಗಳನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ppಮಹಿಳೆಯರ ಚಿನ್ನದ ಒಡವೆ ಹಾಗೂ ಮೊಬೈಲ್​ ನೀರಿನಲ್ಲಿ ಬಿದ್ದಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ಘಟನೆಯಿಂದ ಮದುವೆ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸಂಭ್ರಮದಲ್ಲಿದ್ದ ಸಂಬಂಧಿಗಳು ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.


User: ETVBHARAT

Views: 6

Uploaded: 2025-10-08

Duration: 01:47

Your Page Title