ಪ್ರಧಾನಿ ಉಡುಪಿ ಭೇಟಿ: ಧಾನ್ಯದಲ್ಲಿ ಅರಳಿದ ಮೋದಿ ಕಲಾಕೃತಿ

ಪ್ರಧಾನಿ ಉಡುಪಿ ಭೇಟಿ: ಧಾನ್ಯದಲ್ಲಿ ಅರಳಿದ ಮೋದಿ ಕಲಾಕೃತಿ

pಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ್ದಾರೆ.  ಈ ಹಿನ್ನೆಲೆ ಭದ್ರತೆ ಹಾಗೂ ಪ್ರಧಾನಿ ಅವರನ್ನು ಜಿಲ್ಲೆಗೆ ಅದ್ಧೂರಿಯಾಗಿ ಸ್ವಾಗತಿಸುವ ಸಲುವಾಗಿ ಉಡುಪಿ ಸಕಲವಾಗಿ ಸಿದ್ಧಗೊಂಡಿತ್ತು. ಕೃಷ್ಣನೂರಿನ ಬೀದಿ ಬೀದಿಗಳಲ್ಲಿ ಮೋದಿ ಅವರನ್ನು ಸ್ವಾಗತಿಸುವ ಫ್ಲೆಕ್ಸ್​ಗಳು ರಾರಾಜಿಸಿದವು. ಇದರ ಮಧ್ಯೆ ಉಡುಪಿಯ ಕಲಾವಿದ ಶ್ರೀನಾಥ್​ ಅವರು ಧಾನ್ಯಗಳಿಂದ ರಚಿಸಿರುವ ಪ್ರಧಾನಿ ಮೋದಿ ಅವರ ಭಾವಚಿತ್ರವೊಂದು ಎಲ್ಲರ ಗಮನ ಸೆಳೆಯಿತು. ppಪ್ರಧಾನಿ ನರೇಂದ್ರ ಮೋದಿ ಆಗಮಿಸಿರುವ  ಹಿನ್ನೆಲೆಯಲ್ಲಿ ಅವರನ್ನು ವಿಶಿಷ್ಟವಾಗಿ ಸ್ವಾಗತಿಸುವ ಉದ್ದೇಶದಿಂದ ಕಲಾವಿದ ಶ್ರೀನಾಥ್ ಮಣಿಪಾಲ ಅವರು, ವಿಶಿಷ್ಟವಾದ ಕಲಾಕೃತಿ ರಚಿಸಿದ್ದರು. ಈ ಕಲಾಕೃತಿಯನ್ನು ರಚಿಸಲು ಸುಮಾರು 20 ಕೆಜಿ ಧಾನ್ಯಗಳನ್ನು ಬಳಸಿದ್ದಾರೆ. ವಿವಿಧ ವರ್ಣದ ಧಾನ್ಯಗಳನ್ನು ಪೋಣಿಸಿ ಮೋದಿ ಅವರ 6 ಅಡಿ ಎತ್ತರದ ಭಾವಚಿತ್ರವನ್ನು ರಚಿಸಿದ್ದಾರೆ. ಕಲಾಕೃತಿ ರಚನೆಯಲ್ಲಿ ಕಲಾವಿದ ರವಿ ಹಿರೇಬೆಟ್ಟು ಸಹಕರಿಸಿದ್ದಾರೆ. ಈ ಕಲಾಕೃತಿಯನ್ನು ಶ್ರೀ ಕೃಷ್ಣ ಮಠದ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.


User: ETVBHARAT

Views: 20

Uploaded: 2025-11-28

Duration: 01:13