1 ರೂಪಾಯಿಗೆ 1 ಟಿ ಶರ್ಟ್ ಆಫರ್: ನುಗ್ಗಿ ಬಂದ ಜನ, ಹೊಸ ಬಟ್ಟೆ ಅಂಗಡಿ ಉದ್ಘಾಟನೆಯಂದೇ ಬಂದ್​

1 ರೂಪಾಯಿಗೆ 1 ಟಿ ಶರ್ಟ್ ಆಫರ್: ನುಗ್ಗಿ ಬಂದ ಜನ, ಹೊಸ ಬಟ್ಟೆ ಅಂಗಡಿ ಉದ್ಘಾಟನೆಯಂದೇ ಬಂದ್​

pಗಂಗಾವತಿ: ಇಲ್ಲಿನ ರಾಯಚೂರು - ಲಿಂಗಸಗೂರು ರಾಜ್ಯ ಹೆದ್ದಾರಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವೃತ್ತದ (ಹಳೇಯ ಆಪ್ನಾ ಬಜಾರ) ಸಮೀಪ ನಿನ್ನೆ (ಭಾನುವಾರ) ಖಾಸಗಿ ಬಟ್ಟೆ ಅಂಗಡಿಯೊಂದರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂಗಡಿ ಆರಂಭೋತ್ಸವದ ಪ್ರಯುಕ್ತ ಕೇವಲ ಒಂದು ರೂಪಾಯಿಗೆ ಒಂದು ಟಿ ಶರ್ಟ್, ಒಂದು ಸಾವಿರ ರೂಪಾಯಿಗೆ ಹತ್ತು ಶರ್ಟ್, ಎಂಟು ಶರ್ಟ್, ಆರು ಶರ್ಟ್ ಹಾಗೂ ಒಂದು ಸಾವಿರ ರೂಪಾಯಿಗೆ ಮೂರು ಫ್ಯಾಂಟ್ ಎಂಬಂತಹ ಆಫರ್ ನೀಡಲಾಗಿತ್ತು.ppಸಾಮಾಜಿಕ ತಾಣದಲ್ಲಿ ಈ ಆಫರ್ ವೈರಲ್: ಅಂಗಡಿ ಮಾಲೀಕರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಪ್ರಚಾರ ಮಾಡಿದ್ದರು. ಬಟ್ಟೆ ಅಂಗಡಿಯೊಂದರ ಉದ್ಘಾಟನೆಯ ಅಂಗವಾಗಿ ನೀಡಲಾದ ಬಂಪರ್‌ ಆಫರ್‌ಗಳಿಂದ ಆಕರ್ಷಿತರಾದ ಗ್ರಾಹಕರು ಏಕಕಾಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಗಿಬಿದ್ದರು. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಭಾರಿ ದಟ್ಟಣೆಯಾಯಿತು.ppಜನರನ್ನು ನಿಯಂತ್ರಿಸಿ, ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೆ, ಲಘು ಲಾಠಿ ಪ್ರಹಾರವನ್ನೂ ಮಾಡಿದರು. ಅಷ್ಟೇ ಅಲ್ಲದೇ, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಟ್ಟೆ ಅಂಗಡಿಯ ಬಾಗಿಲು ಹಾಕಿಸಿದ್ದಾರೆ.


User: ETVBHARAT

Views: 86

Uploaded: 2025-12-08

Duration: 01:15