ಶಾಮನೂರು ನಿಧನ ಸಮಾಜಕ್ಕೆ ತುಂಬಲಾರದ ನಷ್ಟ: ಪ್ರಮೋದಾದೇವಿ ಒಡೆಯರ್

ಶಾಮನೂರು ನಿಧನ ಸಮಾಜಕ್ಕೆ ತುಂಬಲಾರದ ನಷ್ಟ: ಪ್ರಮೋದಾದೇವಿ ಒಡೆಯರ್

pಮೈಸೂರು: ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಂತಾಪ ಸೂಚಿಸಿದ್ದಾರೆ.ppಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು, "ಎರಡು ಬಾರಿ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿಯಾಗಿದ್ದೆ. ಅವರು ತುಂಬ ಆಕ್ಟೀವ್ ಆಗಿದ್ದರು. ಅವರ ನಿಧನ ಸುದ್ದಿ ಕೇಳಿ ಆಘಾತ ಆಗಿದೆ. ಸಮಾಜಕ್ಕೆ ಅವರ ಸಾವು ತುಂಬಲಾರದ ನಷ್ಟ ಸಾವಿನ ದುಃಖ ಬರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ" ಎಂದು ಸಂತಾಪ ಸೂಚಿಸಿದ್ದಾರೆ.ppತಡೆಯಾಜ್ಞೆ ಬಗ್ಗೆ ಪ್ರತಿಕ್ರಿಯೆ ಇಲ್ಲ: ಯುನಿಟಿ ಮಾಲ್​ಗೆ ಹೈಕೋರ್ಟ್​ನಲ್ಲಿ ತಡೆಯಾಜ್ಞೆ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮದವರ ಪ್ರಶ್ನೆಗೆ ಅಂತರ ಕಾಯ್ದುಕೊಂಡ ಪ್ರಮೋದಾದೇವಿ ಒಡೆಯರ್ ಅವರು, "ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಇದು ಕೋರ್ಟ್​ನಲ್ಲಿ ಇರುವುದು. ಎಲ್ಲರಿಗೂ ಗೊತ್ತಿದೆ. ಅಲ್ಲದೇ ಈಗ ಕೋರ್ಟ್​ನಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲ, ನಾನು ತಡೆಯಾಜ್ಞೆ ತಂದಿಲ್ಲ. ಮತ್ತೊಂದು ದಿನ ಇದರ ಬಗ್ಗೆ ಮಾತನಾಡುತ್ತೇನೆ" ಎಂದು ಉತ್ತರಿಸಿ ಮುಂದುವರೆದರು.


User: ETVBHARAT

Views: 14

Uploaded: 2025-12-15

Duration: 03:03