ಬಿಗ್ ಬಾಸ್ ಕನ್ನಡ ಸೀಸನ್ 5 : ನಿವೇದಿತಾ ಗೌಡರವರ ಮುದ್ದಾದ ಫೋಟೋಗಳು | Filmibeat Kannada

By : Filmibeat Kannada

Published On: 2017-10-28

110 Views

01:50

Niveditha Gowda, Bigg Boss Kannada 5 Contestant hails from Mysuru. Niveditha Gowda is most famous for Dub smash. Niveditha Gowda is popularly known as Barbie Doll at Big House. Even though Niveditha Gowda is from Karnataka, she speaks Kannada in English accent. So this cute face is in Bigg Boss House & everyone loves her. Niveditha Gowda Craze in social media is growing day by day. Watch this video, to see her unseen photos.

'ನಿವೇದಿತಾ ಗೌಡ ಬರುವವರೆಗೂ ಮಾತ್ರ ಬೇರೆಯವರ ಹವಾ. ನಿವೇದಿತಾ ಗೌಡ ಬಂದ ಮೇಲೆ ಅವರದ್ದೇ ಹವಾ'. ಇದು ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸೃಷ್ಟಿಯಾಗಿರುವ ವಾತಾವರಣ. 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಎಂಟ್ರಿಯಾದ ದಿನವೇ ನಿವೇದಿತಾ ಗೌಡ ಸ್ಟಾರ್ ಆಗಿ ಬಿಟ್ಟಿದ್ದಾರೆ. 17 ಸ್ಪರ್ಧಿಗಳ ಪೈಕಿ ಒಂದೇ ದಿನಕ್ಕೆ ನಿವೇದಿತಾ ಸಖತ್ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರ ದರ್ಬಾರ್ ಬಗ್ಗೆ ಹೇಳುವುದೇ ಬೇಡ. ಯಾವುದೇ ಟ್ರೋಲ್ ಪೇಜ್ ನೋಡಿದರೂ ಅಲ್ಲಿ ನಿವೇದಿತಾ ಬಗ್ಗೆಯೇ ಮಾತು-ಕಥೆ. ಹೀಗಿರುವಾಗಲೇ, ನಿವೇದಿತಾ ಹೆಸರಿನಲ್ಲಿ ಈಗ ಅಭಿಮಾನಿ ಸಂಘಗಳು ಕೂಡ ಹುಟ್ಟಿಕೊಂಡಿವೆ.ಕನ್ನಡವನ್ನ ಆಂಗ್ಲ ಭಾಷೆಯಂತೆ ಮಾತನಾಡುವ, ಮಾತು ಮಾತಿಗೂ ವೈಯ್ಯಾರದಿಂದ ನುಲಿಯುವ ನಿವೇದಿತಾ ಗೌಡ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಕ್ಷಣವೇ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಡಬ್ ಸ್ಮ್ಯಾಶ್ ಮಾಡುವುದರಲ್ಲಿ ನಿವೇದಿತಾ ಗೌಡ ಎತ್ತಿದ ಕೈ. ನಿಜ ಹೇಳಬೇಕು ಅಂದ್ರೆ, ಡಬ್ ಸ್ಮ್ಯಾಶ್ ಜಗತ್ತಿನಲ್ಲಿ ನಿವೇದಿತಾ ಸೂಪರ್ ಸ್ಟಾರ್. ಕನ್ನಡದ ಸೂಪರ್ ಹಿಟ್ ಡೈಲಾಗ್ ಗಳನ್ನು ತಮ್ಮದೇ ಶೈಲಿಯಲ್ಲಿ ನಿವೇದಿತಾ ಹೇಳಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಈಕೆ ಈಗ ಅದರಿಂದಲೇ 'ಬಿಗ್ ಬಾಸ್' ಎಂಬ ದೊಡ್ಡ ಕಾರ್ಯಕ್ರಮಕ್ಕೆ ಬಂದಿದ್ದಾರೆ.

Trending Videos - 28 April, 2024

RELATED VIDEOS

Recent Search - April 28, 2024